...

12 views

ಇನಿಯನ ಮಾತು ❤️
ಒಂದೆರಡು ಮಾತುಗಳಿದ್ದವು ;

ಎಗ್ಗಿಲ್ಲದೆಯೇ ಸಾಗಿತ್ತು
ಒಲವ ಮಾತುಗಳು...
ಮನ ಕರಗುವಂತೆ ನಗಿಸಿದ್ದ
ನಲ್ಮೆಯ ಇನಿಯನವನು...!!

ಹೊತ್ತು ನೆತ್ತಿಗೇರಿತ್ತು ಒಡಲ
ಮಾತುಗಳು ಕಂಪ ಬೀರಿತ್ತು..
ಅವನೊಟ್ಟಿಗೆ ಅಡಿಗಡಿಯ
ಬಂಧ ಮುಗ್ಧತೆಯ ಒಲವ
ನೆನಪಿಸಿಕೊಟ್ಟು ಪ್ರೀತಿಯ
ಓಲೈಸಿದ ಇನಿಯನವನು...!!

ಮಾತು ಮುಗಿಯುತ್ತಿಲ್ಲ;
ಅತ್ತಿತ್ತ ಯಾರಿಲ್ಲ;
ಬೆಳಗಾಗುವ ಮುನ್ನ;
ನಿಮ್ಮೂರ ಸೇರೋ ಚಿನ್ನ;
ಕನಸಲ್ಲಿಯಾದರು ಒಮ್ಮೆ ಬರುವೆ
ಎಂದು ಹೇಳಿ ಹೊರಟಿದ್ದ...!!
❤️ಸುಮನ್ ಹೆಚ್ ಸಿ ❤️