...

12 views

ಹೂವಂತೆ ಬಾಳೋಣ...
ಆಕಾಶದಿ ಮಿನುಗುವ
ನಕ್ಷತ್ರವು ನಿನ್ನನ್ನು ಕಾಣದೆ

ಜಗವೆಲ್ಲ ಮುಗಿಲೆಲ್ಲ
ನಿನ್ನ ಹುಡುಕಾಡಿ, ತಡಕಾಡಿದೆ

ನೀನೊಂದು ಹೂ-ಹಿಡಿದು
ಇದು ಬಾಡುವುದೇಕೆಂದು?

ಬೇಸರದಿ ಬೇಯುತ್ತಿದ್ದರೆ
ನಾನೆಂದೂ ತಿಳಿಯಲಿ ನಿನಗೇನೆಂದೇಳಲಿ?

ಮೊಗ್ಗರಳಿ
ಬಾಡುವಂತಿದೆ ಬಾಳು

ಜಗದ ನಿಯಮವನೆಲ್ಲಾ
ಮೀರಿದ ಪ್ರೇಮ ನಮ್ಮದು

ನಿನ್ನೊಪ್ಪಿಗೆಯ ಕೊಟ್ಟು
ಅಪ್ಪುಗೆಯ ನೀಡಿದರೆ

ನಾವೂ ಹೂವಂತೆ
ಅರಳಿ ಬದುಕಿ ಬಾಳೋಣ...

~ ನಾನ್ಯಾರು ✍️