ಪ್ರಕೃತಿ ಒಳಗುಟ್ಟು
ಸಿರಿಗಡಲ ಒಡಲು ಕಾರ್ಮುಗಿಲು ತರಲು ಎಲ್ಲೆಲ್ಲೂ ಸ್ವಪ್ನಜಾಲ,
ಸವಿ ಬಯಕೆ ಹಕ್ಕಿ ಗಂಜಳವ ತುಪ್ಪಿ ಹೆಣೆಯಿತೊಂದು ಸುಪ್ತಮಾಲ.
ಆ ಮಾಗಿನೆಡೆಯಲಿ ಮೈ ಟಿಸಿಲು ಒಡೆದು ಅರಳಿದವು ಚಿತ್ರಮೈತ್ರಿ,
ಚಿತ್ತಾಗಿ ಹೊಕ್ಕಿ ಮಬ್ಬಾಗಿ ಬೆವೆತು ಪಳ್ಳನುದುರಿತು
ಜೀವತಾಲ.
ಅರೆ ತೆರೆದ ಮನದ ,ಬವಕಳೆದ ದಿಟವ ಕೇಳುತಿಹವು
ಊರಪೂರ.
ಹಿರಿ ನಭದ ಕದನ ಅರೆಬಿರಿದ ವದನ ಉಸುರುವವು
ಗುಪ್ತಸೂಲ,
ಆಹಾ !ಇಹದ ಬೆಳಗೆ, ಎಲ್ಲೆಡೆ ಸುಡುವ ಬೇಗೆ ಎಲ್ಲಿಹುದು ಇಲ್ಲಿಮೂಲ?
ಬಾಂದನಿಯ ಬಣ್ಣ ಕೆನೆಕೊರೆವ ಕಣ್ಣ ಬಿಡಿಸಿದವು
ಕುಂಚಸಾಲ.
ನಿಶೆ ಕೊರೆವ ದಿಟ್ಟಿ ಹರಡಿರಲು ಮುತ್ತಿ ಬೆತ್ತಲಹುದೋ
ಅಂತರಾಳ ,
ಎಡರು ತೊಡರಿನ ಆಚೆ ಈಚೆಯಲಿ ನುಗ್ಗಿದವು ನೆಲಮುಗಿಲ ತಣ್ಣ.
ಎಳೆಚಿಗುರ ಮೈಯ ಹಚ್ಚನೆಯ ರಂಗ ತುಂಬಿಹುದು
ಚೈತ್ರಕಾಲ,
ವಿತ್ತ ಪದಗಳಲಿ ಅರ್ಥ ಹುಡುಕದಿರು ಎನುತಿಹನು ಶಾಂತಿಪಾಲ .
✍️ ರಶ್ಮಿ ಭಟ್.