...

6 views

ಭಾಂಧವ್ಯದ ಸೆಳೆತ
ನನ್ ಮರವೇ ನನ್
ಮರವೇ ಮಾವಿನ ಮರವೇ
ಯಾವಾಗ ನಿ ಆಗುವೆ ಹೆಮ್ಮರವೇ.
ನಿನ್ನಂತೆ ಎತ್ತರಕ್ಕೆ ಬೆಳೆಯುವ ಆಶೆ ನನಗಿದೆ.
ನೀನು ಎತ್ತರಕ್ಕೆ ಬೆಳೆದಷ್ಟು ನಾ
ಬೆಳೆಯುವುದಾದರೆ.

ನಾನೂ ನೀನೂ ಅಣ್ಣ ತಂಗಿಯಾಗಬಹುದಲ್ಲವೇ.
ನಾವಿಬ್ಬರೂ ಗಗನದೆತ್ತರಷ್ಟು ಬೆಳೆದು
ಒಂದೇ ಮೈಬಣ್ಣವಿರುವ ಟೊಂಗೆಗಳ
ಹಾಸಿಗೆ ಹಾಕಿ ಕುಣಿದು ಕುಪ್ಪಳಿಸಬಹುದಲ್ಲವೇ.

ನಮ್ಮಿಬ್ಬರ ಭಾಂಧವ್ಯದತ್ತ ಸಂಶಯದಿಂದ
ನಿಬ್ಬೆರಗಾಗಿ ಕಣ್ಣಾಯಿಸುವ ಜೀವಿಗಳಿಗೆ
ನಾವು ಗಂಡ ಹೆಂಡತಿಯಲ್ಲ ಎನ್ನಬಹುದಲ್ಲವೇ.
ಎಲ್ಲರ ಸಂಶಯಕೆ ಪೂರ್ಣ ವಿರಾಮ ಹಾಕಬಹುದಲ್ಲವೇ.

ನೆರಳಿನ ಆಶ್ರಯ ಹುಡುಕಿ ಬಂದವರಿಗೆ,
ನಮ್ಮ ಬಗ್ಗೆ ಗುಣಗಾನ ಮಾಡುವವರಿಗೆ,
ಟೀಕೆಗಳ ಸುರಿಮಳೆ ಸುರಿಯುವವರಿಗೆ
ಜೊತೆಯಾಗಿ ಸಹಾಯ ಮಾಡಬಹುದಲ್ಲವೇ.
ಅರಿವಿನ ಶಿಕ್ಷಣ ನೀಡಬಹುದಿಲ್ಲವೇ.