...

8 views

ಸೆಳೆಯುವ ಮಲ್ಲಿಗೆ
ಬೇಲಿಯಿಂದೆದ್ದ ಬಯಕೆಗಳು
ನಾಲೆಯಂತೆ ಹರಿದಿವೆ
ಓಲೆಯ ಹಿಡಿದು, ನಗೆಯೆಂಬ ನವನೀತ ಕಡಿದು..
ನಿನ್ನಂದದ ಗರ ಮನದೂರಿಗೆ ಬಡಿದು

ಕರಾರುವಕ್ಕಾದ ದಾಳಿಗೆ
ಮಾಡಲ್ಹೇಗೆ ನಾ ತಕರಾರು
ನೂರಾರು ನೆನಪುಗಳಿಗೆ
ಮುಂಗಾರಿನ ಹನಿಯ ತಾಗಿ
ಸಿಂಗಾರದ ತೇರು ಸಾಗಿ
ಹಬ್ಬವಾಗಿದೆ ನನ್ನೆದೆಯೂರು..

ದಂಡ ವಿಧಿಸಬೇಕಿದೆ
ಕಂಡ ಕಂಡಾಗಲೆಲ್ಲ ಕಾಲ್ಕೆರೆದು ಕಾಡುವ ನೆನಪಿಗೆ
ರಾಜಿಯಾಗಲು ನಾನೆನೂ ಸಿದ್ದ
ಸೂಜಿಗಲ್ಲಿನಂತೆ ಸೆಳೆಯುವ ಮಲ್ಲಿಗೆಗೆ..

ತನ್ನ ತಾ ಮರೆತು ನಿದಿರೆ
ಕುದುರೆಯೇರಿದೆ,
ಜಾಗರಣೇಗಿಳಿಸಿ ಜಪಿಸುವ
ಕಾರ್ಯಕ್ಕೆ ನನ್ನ ದೂಡಿದೆ
ನಿನ್ನದೇ ಸಂಚಿಗೆ ನಿದಿರೆಯ
ಒರತೆ ಖಾಲಿಯಾಗಿದೆ...


*ರಮೇಶ್ ಹಡಪದ*