...

4 views

£ಮುಖವಾಡ £
ಬದುಕು ಬೇರು ಬಿಟ್ಟಿಹುದು ಮುಖವಾಡಗಳ ಬಯಲಿನಲಿ ..
ಮಳೆಬಿಲ್ಲಮೀರಿದ ರಂಗುಗಳಲ್ಲಿ .!

ಅರಿಯದಿರಲೆಂದ್ಹಾಕಿದ ಮುಖವಾಡ ,
ಮುನ್ನಿನವರು ಅರಿತೂ ಲೆಕ್ಖ ಹಾಕಿದರೂ ,
ಸಂಭ್ರಮದ ಸೋಗೆ ನಗು ಮಿಂಚುತ್ತಿರುವುದು ಅಧರಗಳಲಿ ,
ನಾನೇ ಚಾಲಾಕಿ ಎಂಬ ಹಮ್ಮಿನಲ್ಲಿ !

ಹಳಿಯುವೆವು ನಾವು ಮುಖವಾಡದ
ಮುಖವಾಡ ನಮ್ಮೆದುರು ಬಯಲಾದರೆ,
ಬಿಂಬಿಸಿಕೊಳ್ಳುವೆವು ಸಭ್ಯ ಎಂಬ ಚೌಕಟ್ಟಿನಲ್ಲಿ.

ತೋರು ಬೆರಳು ತೋರುತ್ತಿರುವುದು,
ತಾ ಮಿಗಿಲೆಂಬ ಗರ್ವದಲಿ ..
ಮರೆತಿಹುದು ಮೀರಿದುದು ತನ್ನೊಳಗಡಗಿದೆ
ಎಂಬ ಮಿಥ್ಯೆಯಲಿ.🤝
✍️ರಶ್ಮಿಭಟ್