ಓ ಒಲವೆ..
ಓ ಒಲವೆ ನನ್ನೊಲವೆ ನಿನ್ನಲ್ಲಿ ನಾನಾಗುವೆ
ನೀ ಬಂದು ಸೇರು ನನ್ನ ಹೃದಯದ ಊರಿಗೆ.,
ನೀನಾಡುವ ಪ್ರತಿ ಪದಗಳಿಗೆ ಸ್ವರ ನಾನಾಗುವೆ
ನೀ ಬೆರೆತು ಉಸಿರಾಗು ನನ್ನಯ ಈ ಬದುಕಿಗೆ...
ಕಾಣುವ ಕನಸಲಿ ನಿತ್ಯವೂ ಹಾಜರಿ ಹಾಕುವೆ
ಹೆಗಲಾಗಿ ಬಿಡು ಜೀವನ ಯಾನದ ಬಂಡಿಗೆ
ಕಂಗಳ ಹೊಳಪಂತೆ ಜೊತೆ ಜೊತೆ ಸಾಗುವೆ
ಹಸಿರಂತೆ ಹೆಸರಾಗಿಬಿಡು ಉಸಿರಗೂಡಿಗೆ...
ಕಷ್ಟ ಸುಖದಿ ಕರಪಿಡಿದು ಹೆಜ್ಜೆಯ ಹಾಕುವೆ
ಇಷ್ಟದಿ ಸಹಕರಿಸು ನನ್ನೆಲ್ಲಾ ಕನಸುಗಳಿಗೆ
ಬಾಳ ಹಾದಿಯಲಿ ಬೆಳಕಾಗಿ ದಾರಿತೋರುವೆ
ಕಿರು ಬೆರಳ ಬೆಸೆದು ಕೊರಳೊಡ್ಡು ಕರಿಮಣಿಗೆ...
ನಿನ್ನೆಲ್ಲಾ ಹರುಷಕೆ ಕಾರಣವೇ ನಾನಾಗುವೆ
ಎದೆಗುಂದದೆ ಎರವಲು ಕೊಡು ಮುಗುಳುನಗೆ
ಕೊನೆತನಕ ನಿನ್ನ ಉಸಾಬರಿ ನೋಡಿಕೊಳ್ಳುವೆ
ಹೊರಡಲೇಬೇಕು ಒಂದು ದಿನ ಬೀರಿ ಹೂನಗೆ...
#Kannada #kannadapoem #vijaykumarvm #ವಿಬೆಣ್ಣೆ
© ವಿಜು ✍ 💞
ನೀ ಬಂದು ಸೇರು ನನ್ನ ಹೃದಯದ ಊರಿಗೆ.,
ನೀನಾಡುವ ಪ್ರತಿ ಪದಗಳಿಗೆ ಸ್ವರ ನಾನಾಗುವೆ
ನೀ ಬೆರೆತು ಉಸಿರಾಗು ನನ್ನಯ ಈ ಬದುಕಿಗೆ...
ಕಾಣುವ ಕನಸಲಿ ನಿತ್ಯವೂ ಹಾಜರಿ ಹಾಕುವೆ
ಹೆಗಲಾಗಿ ಬಿಡು ಜೀವನ ಯಾನದ ಬಂಡಿಗೆ
ಕಂಗಳ ಹೊಳಪಂತೆ ಜೊತೆ ಜೊತೆ ಸಾಗುವೆ
ಹಸಿರಂತೆ ಹೆಸರಾಗಿಬಿಡು ಉಸಿರಗೂಡಿಗೆ...
ಕಷ್ಟ ಸುಖದಿ ಕರಪಿಡಿದು ಹೆಜ್ಜೆಯ ಹಾಕುವೆ
ಇಷ್ಟದಿ ಸಹಕರಿಸು ನನ್ನೆಲ್ಲಾ ಕನಸುಗಳಿಗೆ
ಬಾಳ ಹಾದಿಯಲಿ ಬೆಳಕಾಗಿ ದಾರಿತೋರುವೆ
ಕಿರು ಬೆರಳ ಬೆಸೆದು ಕೊರಳೊಡ್ಡು ಕರಿಮಣಿಗೆ...
ನಿನ್ನೆಲ್ಲಾ ಹರುಷಕೆ ಕಾರಣವೇ ನಾನಾಗುವೆ
ಎದೆಗುಂದದೆ ಎರವಲು ಕೊಡು ಮುಗುಳುನಗೆ
ಕೊನೆತನಕ ನಿನ್ನ ಉಸಾಬರಿ ನೋಡಿಕೊಳ್ಳುವೆ
ಹೊರಡಲೇಬೇಕು ಒಂದು ದಿನ ಬೀರಿ ಹೂನಗೆ...
#Kannada #kannadapoem #vijaykumarvm #ವಿಬೆಣ್ಣೆ
© ವಿಜು ✍ 💞