...

3 views

ಏನು ಬರೆಯಲಿ....!
ಏನು ಬರೆಯಲಿ ನೋಡಿ ನಿನ್ನ
ಸೌಂದರ್ಯದ ಕೌತುಕ..!
ಶಬ್ದಗಳೆಲ್ಲ ಕಾಣೆಯಾಗುವವು
ನಾ ಬರೆಯ ಬೇಕೆಂದ ಸಮಯಕ್ಕ!

ನನ್ನ ಕವನದ ಸಾಲುಗಳಿಗಿಂತ
ಹೆಚ್ಚು ನಿನ್ನ ಮೈ ಮಾಟದ ತೂಕ!
ಹೃದಯ ಬಡಿತವೇ ನಿಲ್ಲುವುದು
ನೀ ನನ್ನ ಎದುರು ಬಂದ ಆ ಕ್ಷಣಕ್ಕ!

ನಿನ್ನ ಕಂಗಳಲಿ ಅಡಗಿದಂತಿದೆ
ಅರ್ಜುನನ ಆ ಪಾಶು ಪತಾಸ್ತ್ರ!
ಅದಕೆ ಏನೋ ನಿನ್ನ ಕಂಡೊಡನೆ
ಅನಿಸುವುದು ನನಗೆ ನಿಶ್-ಶಸ್ತ್ರ!

ನಿನ್ನ ಕಿರುನಗೆಯ ದಾಳಕೆ ಸಿಕ್ಕು
ಒದ್ದಾಡುವುದು ನನ್ನ ಹೃದಯ!
ಬಯಸುವುದು ಮನಸು ಸದಾ
ನಾವು ಒಂದಾಗುವ ಆ ಸಮಯ!!

:- ಎಂಬೀಚಿ🌹🌹

© All Rights Reserved