ಓ ಮುದ್ದು ಮನವೇ.. ❤️
ಓ ಮುದ್ದು ಮನವೇ... ❤️
ನನ್ನ ನಲ್ಮೆಯ ಸಿರಿಯ ನಿನರಿಯೇ,
ನಿನ್ನ ಪ್ರೇಮದ ಪರಿಯ ನಾನರಿಯೇ,
ವರ್ಣಿಸಲಾಗದ ಭಾವ ಸಾಗರದಲಿ
ಮಿಂದೆದ್ದ, ಮಂದಸ್ಮಿತ ಮಿತ ಭಾಷೆಯಲಿ
ಸೆಳೆದಿರುವ ಮೃದು ಹೃದಯಿ ಇವನು..!!
ಮಧುರ ಮಾತಿನ ದನಿಯ ಕೇಳುವ ತವಕ,
ಏನೆಂದು ಬಣ್ಣಿಸಲಿ ಅವನೊಲವ ಜಳಕ,
ಸವಿನುಡಿಯ ಕೇಳುತಿದ್ದರೆ ಮೈಯೆಲ್ಲಾ ಪುಳಕ,
ಮೌನದಿ ಇರುವನು ನನ್ನ ಧನ ಕನಕ..!!
ಕಡಲಾತ್ಮ ಸೆಳೆಯೊ ಸೆಳೆತ ಸ್ನೇಹದೊಲವು,
ತನ್ನಷ್ಟಕ್ಕೆ ಮನದಿ ನಗುತಿದ್ದ ಎಂಥಹ ಚೆಲುವು,
ಮಾತಿನ ಚಕಮಕಿಗೆ ಮರುಳಾಗಿತ್ತು ನನ್ನ...