...

31 views

ಅದೇನೋ ಸೆಳೆತ
ಸೆಳೆತ ಅದೇನೊ ಸೆಳೆತಾ
ನಿನ್ನದೇ ಗುಂಗೊಳಗಿದೆ ಮನ ಮಿಡಿತ//

ತುಟಿಯಂಚಿನ ನಗೆಯು
ಮನ ಕಡಲಿನ ಸೊಬಗು
ಬೆರಗಾಗಿಸೊ ಆ ನಿನ್ನ ಮೊಗಕೆ
ಮುತ್ತಿಡುವ ಮನದಾಳದ ಹರಕೆ //ಸೆಳೆತ//

ವಯ್ಯಾರಕ್ಕೀಗ ಗಾಂಧಾರ ಒಲವು
ಸಿಂಗಾರದ ಸಿರಿಗೆ ಬೇಲೂರೆ ಬೆರಗು
ನನ್ನ ಒಳ ಸಂಚಾರಿ ನೀನಾಗಿರಲು
ನನಗೀಗ ವಸಂತ ಋತುವಿನ ಅಮಲು //ಸೆಳೆತ//

✍️ಭಾವಶರಧಿ
© All Rights Reserved