...

13 views

ಮನ ಅರಿಯದ ಭಾವ ......ಅದೇ ಪ್ರೀತಿ
ಹೊಸತನ ಶುರುವಾಗಿದೆ
ನನ್ನಲ್ಲಿ ಇಂದು
ತಿಳಿದಿಲ್ಲ ನನಗೆ
ಏನಾಗುತ್ತಿದೆ ಎಂದು

ಪ್ರತಿದಿನವೂ ಏನೋ
ವಿಶೇಷವೆನಿಸುತಿದೆ ..
ಹುಡುಕಿದರೆ ಸಿಗುತ್ತಿಲ್ಲ
ಕಾರಣವೇನಿದೆ ಎಂದು?

ಕಾಡುತಿದೆ ಸುಮ್ಮನೆ
ಮನದಲ್ಲಿ ಒಂದು ಭೀತಿ
ಅರಿಯೆನು ನಾ ಅದರ ರೀತಿ
ಅನಿಸುತಿದೆ ಇದೇನಾ ಪ್ರೀತಿ ಎಂದು

ಪ್ರೀತಿಯ ಪರಿಚಯ ನಿನ್ನಿಂದ
ಮಾಡುತಿದೆ ಮನದಲ್ಲಿ ಆನಂದ
ಪರಿಚಯಿಸಿದೆ ನನ್ನನೇ ನೀ ನನಗಿಂದು
ಪ್ರೀತಿಯ ಪಯಣ ಶುರುವಾಯಿತಿಂದು

ನಡೆದಿಹುದು ತಿರುವು ಜೀವನದಲ್ಲಿ
ಕಾರಣ ನೀನೇ ಎಂದು ಕಂಡೆ ನಿನ್ನ ಕಣ್ಣಲ್ಲಿ
ನನ್ನ ಸಾರ್ಥಕ ಜೀವನಕೆ ಆಗು ನೀ ಸಾಕ್ಷಿ
ಇದು ನಿಜ ಎಂದು ನುಡಿಯುತಿದೆ ನನ್ನ ಮನಸಾಕ್ಷಿ

#kannadapoems #kannadaquotes #manuthoughts # lovelife

© ✍🏻ಮನು (Manu )