...

18 views

ಅಪರಿಚಿತ ಭಾವದೊಳು
ಅಪರಿಚಿತನಂತೆ ದೂರ ಉಳಿದು
ಪುನಃ ಪರಿಚಿತನಂತೆ ಸನಿಹವಾಗಿ
ಮತ್ತದೇ ಅಪರಿಚಿತ ಭಾವದೊಳು ಮೌನವಾಗುವ ಓ ಮನಸೇ ಹೇಳು
ಪ್ರೀತಿಸುವ ಹೃದಯದ ಗತಿಯೇನು?

ಇದ್ದಕ್ಕಿದ್ದಂತೆ ನನ್ನೊಳಗೆ ನಿನಗಾಗಿ
ಹೊರ ಹೊಮ್ಮುವ ಭಾವನೆಗಳ
ಗಂಟು ಮೂಟೆ ಕಟ್ಟಿ ಅದೆಷ್ಟಂತ
ಬಚ್ಚಿಡಲು ಸಾಧ್ಯ ನೀನೆ ಹೇಳು?

ನಿನ್ನ ಕಂಡ ನನ್ನೀ ಕಂಗಳು
ನಿನ್ನಲ್ಲೆ ಸೆರೆಯಾಗುಳಿಯಲು ಬಯಸಿ
ನಿನ್ನದೇ ಜಪವನಾಚರಿಸಿದರೆ
ಕುಪಿತಗೊಂಡು ಕೂರಲು ಸಾಧ್ಯವೇನು?

ಪ್ರತಿಯೊಂದು ಕ್ಷಣದ ಖುಷಿ
ಹೃದಯಕ್ಕೆ ಹರ್ಷೋದ್ಗಾರದ ಅತಿರೇಖವಾಗಿ ತಿಲ್ಲಾನ ವಾಡುತ್ತಿರುವಾಗ
ಅಡ್ಡಗೊಡೆಯಂತಾವರಿಸುವ ಬುದ್ದಿಗೆ
ಸಹಕಾರ ಹೇಗೆ ನೀಡಲಿ ನಾನು?

ನಿಬ್ಬೆರಗಾದ ಮೌನವಂತು ಸುಂದರವಾದ‌ ಜೀವಕಳೆಯೊಳಗೆ ಬೆರೆತು ವೈಭವೀಕರಣಗೊಳಿಸುತ್ತಿರುವಾಗ
ನಾ ಹೇಗೆ ದೂರ ಸರಿಯಲಿ ಹೇಳು?

ಮನಸುಗಳು ಎದುರಾಗುವಗಳಿಗೆ ತೋರಲಿಲ್ಲನೀ ಅನುರಾಗದ ಸಲಿಗೆ ನಿರ್ಭಾವುಕತೆಯಲಿ ನೊಂದ ಹೃದಯ
ನಿಸ್ತಾರದ ನಿಟ್ಟುಸಿರು ಬಿಟ್ಟು
ಒಂಟಿಯಾಗಿದೆ ನೋಡು

ಮುಖವಾಡವ ತೊರೆದು ಬೀಗು ಮುಕ್ತಭಾವದಲಿ ಬೆರೆತು ಬಾಗು
ಶರಣಾಗಲಿ ಮನಸು ವಿಧಿಯ ಆಟದೊಳು.
ಸೌಹಾರ್ದತೆಯ ಸಹಬಾಳ್ವೆಗೆ ನೀ ಸ್ಪೂರ್ತಿಯಾಗು.

✍️ಭಾವಶರಧಿ
© All Rights Reserved