...

4 views

ನಲ್ಲನ ನೆನಪು
ಆ ಮೇಘ ದೂರಾದರು,
ಮಳೆಯಾಗಿ ಬಳಿ ಬರುವುದು,
ನೀನಿಂದು ಮರೆಯಾದರು,
ನಿನ್ನ ನಗುವ ಮನ ನೆನೆವುದು.

ಪ್ರತಿಬಿಂಬವಾದೆ ನೀನು,
ನನ್ನ ಮನದ ಕನ್ನಡಿಯಲ್ಲಿ,
ಮುಂಜಾನೆಯಲಿ ನಡೆದಾಗ ನಾನು,
ಕಂಡೆ ನಿನ್ನ ಇಬ್ಬನಿಯಲ್ಲಿ.

ನಗೆಹೂವಿನ ಪುಂಜ ಆ ದಿನಗಳು
ಮತ್ತೇ ಬರುವುದೇ?
ಕಂಬನಿ ತುಂಬಿದ ನನ್ನೀ ಕಂಗಳು
ನಿನ್ನ ಮರೆವುದೇ?

ನಿವೇದಿತ