...

11 views

ಮಾಯಾ ಲೋಕ
ಬಣ್ಣ ಬಣ್ಣದ ಲೋಕದಲ್ಲಿ
ಕೆಲವು ಬಣ್ಣಗಳು ಅರ್ಥವಾಗುವುದಿಲ್ಲ,
ಹಾಗೆಯೇ ಕೆಲ ಮನಸ್ಸುಗಳನ್ನು ಅರ್ಥಮಾಡಿಕೊಳ್ಳುವುದು ಕಷ್ಟ....

ಅರ್ಥಮಾಡಿಕೊಳ್ಳದ ಪ್ರಪಂಚದಲ್ಲಿ
ಜೀವಿಸುವುದು ಕಷ್ಟವೆನಿಸುತ್ತಿದೆ
ಬದುಕು ಬೇಸರವಾದಂತೆ ಭಾಸವಾಗುತ್ತಿದೆ,

ನಿನಗೂ ನನ್ನ ಮೇಲೆ ಮುನಿಸೇ....??
ಹೇಳಿಕೊಳ್ಳಲು ಇನ್ಯಾರಿರುವರು?
ನೀನಲ್ಲದೆ ಯಾರಿಹರು ನನಗೆ?

ಅಳಲು ಕಣ್ಣೀರು ಬತ್ತಿ ಹೋಗಿವೆ,
ಸಹಿಸಿಕೊಳ್ಳುವ ಮನಸ್ಥಿತಿ ಕೆಟ್ಟು ಹೋಗಿದೆ
ಇನ್ಯಾರಿಂದ ಏನನ್ನು ಬಯಸಲಿ?

ಕರ್ಮದ ಬಲೆಯಲ್ಲಿ ಸಿಕ್ಕಿರುವೆ ನಾ...!!
ಬಿಡುಗಡೆ ಬಯಸುವುದು ತಪ್ಪೇ?
ಯಾಕೆ ನನಗೆ ಇಂತಹ ಶಿಕ್ಷೆ????

ಕನ್ನಡಿಗಿಂತ ಒಳ್ಳೆ ಮಿತ್ರ ಯಾರಿಹರು ???

#kannadaquotes #manuthoughts
© ✍🏻ಮನು (Manu )