...

27 views

ಭಾವದೊಳಗೆ
ನನ್ನ ಮನದ ಭಾವದೊಳಗೆ ನಿನ್ನ
ಅನುಬಂಧಗೊಳಿಸಿಯಾಗಿದೆ
ಅದೇಕೊ ನನ್ನ ವಿಷಯದಲ್ಲಿ ನೀ ಅಪರಿಚಿತ ಭಾವತೋರಿ ದೂರಾಗುತ್ತಿರುವೆ
ನಿನಗಷ್ಟೆ ನೀ ಬಂಧುವಾಗು ಎಂದು ಮನಸು ಹೇಳಿದಾಗಲೆ ಅರಿವಾಗಿ
ಮತ್ತದೇ ಒಂಟಿ ಬದುಕಿನ ಕಾಂತಾರ ದೊಳಗೆ ಮೌನಿಯಾಗಿ ಹೋದೆ.
ತಿಳಿದೊ ತಿಳಿಯದೆಯೋ ನಂಬಿಕೆಯ ನೆರಳ ಹಿಂಬಾಲಿಸಿ ಹೋದೆ
ಅದೇ ನೋಡು ನನ್ನಿಂದಾದ ಅತಿದೊಡ್ಡ ಅಪರಾಧ
ಅದಕ್ಕೆಂದೆ ಶಿಕ್ಷೆಯೂ ತುಂಬಾ ದೊಡ್ಡದಿದೆ ಪಶ್ಚಾತ್ತಾಪದ ಬೆಂಕಿಯೊಳಗಿನ ವೈರಾಗ್ಯದ ವಿಷಾದ.
ನಿನ್ನ ನೆನಪಿನಾಳದೊಳಗಿನ ಸಂಕಟಗಳಿಗೂ ಕನಿಕರವಿಲ್ಲ
ನೋವನ್ನು ಕೆಣಕುವ ಶಿಸ್ತುಬದ್ದತೆಗೆ ಒಳ್ಳೆಯತನಕೂ ಸಾವಾಗಿ ಹೋಯಿತೀಗ.

✍️ಭಾವಶರಧಿ