ನನ್ನೊಲವೇ
ನೀನೊಂದು ಬೆಚ್ಚನೆಯ ಅಪ್ಪುಗೆ ಮನದೊಳಗೆ
ಘಲ್ ಎನುವ ಮುದವಾದ ಕಾಲ್ಗೆಜ್ಜೆ ಧ್ವನಿಯು ನೀನು ನಾನಿಡುವ ಪ್ರತೀ ಹೆಜ್ಜೆಗೆ ಕತ್ತಲು ಕವಿದ ಕಾನನದಿ ಮಿಂಚು ಹುಳುವಿನ ಬೆಳಕಂತೆ ನೀನು,
ಸದಾ ಮಂದಹಾಸದಿ ನಗುವ ಮಗುವು ನೀನು,
ಇನ್ನೇನು ಹೇಳಲಿ ನಿನ್ನ ಬಗ್ಗೆ
ಹೃದಯ ಮಂದಿರದಿ ನಿಶ್ಚಲವಾಗಿ ಉರಿವ ದೀಪ ನೀನು
ಆ ಬೆಳಕ ತುಂಬಿಕೊಂಡ ಕಾಂತಿ ನಾನು
ನಿನ್ನೊಡಲ ಶಕ್ತಿಯಾಗಿ ಸಂಚರಿಸುವ
ಸಹಚಾರಿಣಿಯಾಗಿ ಜೊತೆಗೆ ಬರುವೆನು
ಕಂದೀಲ ಕೊನೆಯ ಘಮವಾಗಿ
ನಿನ್ನಲ್ಲಿ ಒಂದಾಗಿಬಿಡುವೆನು!