...

20 views

ನನ್ನ ಮನದ ಅರಸಿ...
ಚಿಗುರು ಹಸಿರಿನ ಅಂದವ ಕದ್ದವಳಂತೆ,
ತುಂತುರು ಮಳೆ ಹನಿಯೂ ಮೆಲ್ಲನೆ ಗಲ್ಲಕ್ಕೆ ಸವರಿದಂತೆ,
ನುಲಿಯುವ ನವಿಲಿನ ಜೊತೆಗೂಡಿ ನಡಿಗೆ ಕಲಿತಂತೆ,
ಆ ಮೈದುಂಬಿಯ ಸೊಬಗ ಕಂಡು ನಿಸರ್ಗವೇ ನಿಬ್ಬೆರಗಾಯಿತಂತೆ.

ಮೂಗುತಿಯ ತವಕ ನಿನ್ನ ಮೊಗದಿ ಮೀನುಗುವ.
ಜುಮಕಿಯು ಕನಸ್ಸು ನಿನ್ನ ಕಿವಿಯಲ್ಲಿ ತೂಗುವ.
ಕಾಲ್ಗೆಜ್ಜೆಗಳು ಕಾತುರ ನಿನ್ನ ಹೆಜ್ಜೆಗೆ ಧನಿಯಾಗಲು.
ಆ ಸೂರ್ಯನು ಕಾತುರದಿಂದ ಕಾಯುತ್ತಿರುವನು ನಿನ್ನ ಹಣೆಯ ಬೊಟ್ಟಿನ ಸಿಂಧೂರವಾಗಲು.

ಮುಂಬತ್ತಿಯ ಬೆಳಕಲ್ಲಿ ನೀ ಕಾಣಲು.
ಅದುವೇ ಈ ಜನ್ಮಕ್ಕೆ ಸ್ವರ್ಗದ ಬಾಗಿಲು.
ಕಣ್ಮುಚ್ಚಿ ನೆನೆದರೆ ನೀನೊಬ್ಬಳೇ ಕಾಣುವೆ ಮನದಲ್ಲೂ.
ನಿನ್ನ ಬರುವಿಕೆಗಾಗಿ ಸದಾ ಕಾಣುತ್ತಿರುವೆ ನಾ ಸದಾ ಕನಸಲ್ಲೂ........

ನಿನ್ನೊಂದಿಗೆ ನನ್ನ ಬರಹಗಳ ಪಯಣ....

ಇಂತೀ ನಿನ್ನವ..❤️❤️

© All Rights Reserved