...

8 views

ಎಲ್ಲವೂ ಇಲ್ಲೆ ಇದೆ
ಎಲ್ಲವೂ ಇಲ್ಲೆ ಇದೆ...
ನಮ್ಮಲ್ಲಿದೆ...
ನಮ್ಮೊಳಗಿದೆ...

ಪ್ರಶ್ನೆಯೂ ಇದೆ...
ಅದರ ಉತ್ತರವೂ ಇದೆ...
ಕಷ್ಟವೂ ಇದೆ...
ಅದರ ಪರಿಹಾರವೂ ಇದೆ...
ಭಯವೂ ಇದೆ...
ಅದನ್ನು ಓಡಿಸುವ ಧೈರ್ಯವೂ ಇದೆ...
ದ್ವೇಷವೂ ಇದೆ...
ಅದನ್ನು ಸೋಲಿಸುವ ಪ್ರೀತಿಯೂ ಇದೆ...
ಕೋಪವೂ ಇದೆ...
ಅದನ್ನು ಕ್ಷಮಿಸುವ ಶಾಂತಿಯೂ ಇದೆ...
ಕಹಿಯೂ ಇದೆ...
ಅದನ್ನು ಮರೆಸುವ ಸಿಹಿಯೂ ಇದೆ...
ಕೆಡಕೂ ಇದೆ...
ಅದನ್ನು ತಿದ್ದುವ ಒಳಿತೂ ಇದೆ...
ಸೋಲೂ ಇದೆ...
ಅದರ ಹುಟ್ಟಡಗಿಸುವ ಗೆಲುವೂ ಇದೆ...
ಜೀವನದಲ್ಲಿ ಎಲ್ಲವೂ ಇದೆ...
ಆ ಎಲ್ಲವೂ ನಮ್ಮಲ್ಲಿಯೇ ಇದೆ...

ಇನ್ನೇಕೆ ಚಿಂತೆ?
ಬಿಡು ನೀ ಚಿಂತೆಯನ್ನು,
ಬಾಳು ನೀ ನಿಶ್ಚಿಂತೆಯಿಂದ.


© All Rights Reserved