...

2 views

ಸುಳಿಗಾಳಿ
ಸುಳಿಗಾಳಿ
++++++++

ಸುಳಿಗಾಳಿಯಂತೆ ನೀಬಳಿ ಬಂದ ಕ್ಷಣವು
ಮುಂಗಾರು ಹನಿಯು ಸುರಿದಂತೆ ಇಳೆಗೆ
ಎದೆ ಹೊಲದಿ ಪಚ್ಚೆ ತೆನೆಪೈರು ಗೆದರಿ
ಮರಳಿದ್ದೆ ತಿರುಗಿ ಯೌವ್ವನದ ಕಳೆಗೆ||

ಮಧು ಮಾತಲ್ಲಿ ಕನಸುಗಳ ತೆರೆದಿಟ್ಟು
ತಾರೆಗಳ ಲೋಕವನೆ ಸನಿಹ ಕರೆದೆ
ಚಂದ್ರಕೆಯ ತಂಪಿಗು ಸಿರಿಮೈ ಸುಡದಂತೆ
ಒಲವ ಬಾಹುಗಳ ಹಂದರವ ಹೆಣೆದೆ||

ಭಾವದಲೆಗಳ ಲಘವಾದ ಕಂಪನಕೆ
ತನು ಮನವ ಅರ್ಪಿಸುತ ಮರೆತೆ ನನ್ನ
ಮುಪ್ಪಿನಾ ಹೊಸ್ತಿಲಲಿದ್ದರು ರತಿಚೆಲುವು
ಕುಂದದೆಯೆ ಮೆರೆದಿತ್ತು ಎದೆಯಲ್ಲಿ ನಿನ್ನ||

ಬಚ್ಚಿಟ್ಟು ಸವಿಯುವೆ ನವಿನೆನಪನೆಲ್ಲ
ನವಿಲು ಗರಿ ಸವರುವ ಹಾಗೆಯೇ ನಲ್ಲ||


ಸೌಮ್ಯಾ ಭಟ್
© All Rights Reserved

Related Stories