...

19 views

ಮನಸ್ಸು
ಕಣ್ಣಿಗೆ ಕಾಣದೊಂದು ಮುಖ
ನಿನ್ನೊಳಗೆ ಇರಲು
ಅರಿಯಲು ಬೇಕಿಲ್ಲ
ಯಾವುದೇ ಶಕ್ತಿಯು

ಮುಖದಲ್ಲಿ ಕಾಣುವುದು
ಮಂದಹಾಸದ ನಗೆ
ಮನದಲ್ಲಿ ತುಂಬಿಹುದು
ಕಲ್ಮಶವೆಂಬ ಹೊಗೆ

ಕಲ್ಮಶದಿಂದ ಕೂಡಿದ ಮನಸಲಿ
ಅರಳಿಸು ಹೂವಿನ ಸುಗಂಧವ
ಬೇಡದ ಕೆಟ್ಟ ಯೋಚನೆಗೆಳಿಂದ
ತಿಳಿಮಾಡು ನಿನ್ನ ಒಳಮನವ

ಮನಸಿಗೆ ಕಪ್ಪು ಬಿಳುಪು ಎಂಬ
ಎರಡು ಮುಖಗಳಿರಲು
ಸರಿಯೇನೆಂದು ಯೋಚಿಸಿ
ನಿರ್ಧರಿಸು ನಿನ್ನಂತರಂಗವ

ಅರಿಯಿರಿ ನಿಮ್ಮ ಮನಸಿನ
ಪ್ರಬಲತೆಯ ಒಳ್ಳೆ ಮುಖವ
ಓಡಿಸಿ ದುರ್ಬಲತೆಯೆಂಬ
ಕೆಟ್ಟ ಕಪ್ಪು ಮುಖವ

ಕೆಟ್ಟ ಪ್ರಪಂಚ ಎಂದು
ದೂರುವ ಬದಲು
ಮನಸಿನ ದೃಷ್ಟಿಕೋನ
ಬದಲಿಸಲು ಪ್ರಯತ್ನಿಸು

ನಿಷ್ಕಲ್ಮಶ ಮನಸಿಗೆ
ಸಿಗುವುದು ಬರೀ ಪ್ರೀತಿ
ಬಯಸದ ಪ್ರೀತಿಯು
ಸಿಕ್ಕರೆ ಮತ್ತೇಕೆ ಭೀತಿ

#kannadaquotes #manuthoughts #kannadapoetry #ಮನಸ್ಸು
© ✍🏻ಮನು (Manu )