...

10 views

ಅಲೆಯ ಭಾವನೆ
ಆಗಸದಂತೆ ವಿಶಾಲವಾದ ಸಾಗರದಲ್ಲಿರುವ ಕೋಟ್ಯಾನುಕೋಟಿ ಅಲೆಗಳಲ್ಲಿನ ಆ ಒಂದು ಅಲೆಯ ಬಗೆಬಗೆಯ ಭಾವನೆಗಳ ನುಡಿಗಳೆ, ಈ ಕವಿತೆ

ಅಲೆಯ ಭಾವನೆ
-------------------

ನಾ ಸಮುದ್ರದ ಅಲೆಯ ಮಾದರಿ,
ನಿಲ್ಲೆನು ಎಲ್ಲು, ನಿಲ್ಲಲಾರೆನು ಎಲ್ಲು...

ನಾ ಬರುವಾಗ ಹೇಗಿರುವಿರೊ ಹಾಗೆಯೆ ತಿಳಿವೆ
ನಾ ಬಂದಾಗ ನಗುತ್ತಿದ್ದರೆ, ಸಂತಸದಿಂದಿದ್ದೀರಿ ಎಂದುಕೊಳ್ಳುವೆ
ನಾ ಬಂದಾಗ ಅಳುತ್ತಿದ್ದರೆ, ದುಃಖದಲ್ಲಿದ್ದೀರಿ ಎಂದುಕೊಳ್ಳುವೆ
ನಾ ಬಂದಾಗ ಅತ್ತುನಗುತ್ತಿದ್ದರೆ, ಜೀವಿಸುತ್ತಿದ್ದೀರಿ ಎಂದುಕೊಳ್ಳುವೆ

ನಾ ಸಮುದ್ರದ ಅಲೆಯ ಮಾದರಿ,
ನಿಲ್ಲೆನು ಎಲ್ಲು, ನಿಲ್ಲಲಾರೆನು ಎಲ್ಲು...
ನಾ ಬರುವೆ ನನ್ನ ಛಾಪನ್ನು ಮುಡಿಸಲೆಂದು ಇಲ್ಲಿ,
ಆದರೆ ಎಷ್ಟುಬಾರಿ ಬಂದರು ನಿಲ್ಲುತ್ತಿಲ್ಲ ಅದು ಇಲ್ಲಿ,
ಏನು ಮಾಡಲಿನಾನು ನನ್ನತನವನ್ನು ಉಳಿಸಲು, ತೋರಿಸಲು
ಏನು ಮಾಡಿದರು ಆಗುತ್ತಿಲ್ಲವಲ್ಲಾ ಅದು ಇಲ್ಲಿ, ನನಗೆ..
ಯಾರನ್ನು ಕೇಳಲಿ ನಾನು ಸಹಾಯಕೆ, ಯಾರು ಬರುವರು ಇಲ್ಲಿ, ನನಗಾಗಿ ನಿಲ್ಲಲು ಸಹಾಯಕೆ

ನಾ ಸಮುದ್ರದ ಅಲೆಯ ಮಾದರಿ,
ನಿಲ್ಲೆನು ಎಲ್ಲು, ನಿಲ್ಲಲಾರೆನು ಎಲ್ಲು...
ಏನು ಪ್ರಯೊಜನ ನನ್ನಿಂದ ಈ ಜಗಕೆ, ಎನ್ನಿಸೆ..
ಏನೂ ಇಲ್ಲದಿರೆ ಯಾರು ಇರುವುದಿಲ್ಲವಿಲ್ಲಿ, ಏನೊ ಇದೆಯೆಂದು ತಿಳಿ, ತಿಳಿದು ನಡೆ ಮುಂದೆನೀ, ಏಂದೆನ್ನಿಸೆ..
ಕಾಯುವೆನು, ಕಾದುನೋಡುವೆನು ಏನಿಹುದೊ ನನ್ನ ಪಾಲಿಗೆ
ಮತ್ತೆ ಮತ್ತೆ ನನ್ನ ಛಾಪನ್ನು ಮುಡಿಸುವ ಪ್ರಯತ್ನವ ಮಾಡುವೆನು ನೋಡುವೆನು ಎನಾಗುವುದೊ ಇನ್ನುಮುಂದೆ
ನಾ ಸಮುದ್ರದ ಅಲೆಯ ಮಾದರಿ,
ನಿಲ್ಲೆನು ಎಲ್ಲು, ನಿಲ್ಲಲಾರೆನು ಎಲ್ಲು...

ನನ್ನನ್ನು ನೋಡಿ ಸಂಭ್ರಮಿಸುವರು, ಸ್ಪೂರ್ತಿಗೊಳ್ಳುವರು, ದುಃಖ ಮರೆಯುವರು ಒಂದೆಡೆ
ನನ್ನನ್ನು ನೋಡಿ ಗೇಲಿಮಾಡುವರು, ದೂರಸರೆಯುವರು, ಭೀತಿಗೊಳ್ಳುವರು ಇನ್ನೊಂದೆಡೆ
ಹಾಗಾದರೆ ಯಾರು ನಾನು ಈ ಜಗಕೆ,
ಒಳಿತೋ ಕೆಡಕೋ ಏಂದೆನಿಸೆ..
ಏನಾದರಾಗಲಿ ಎಂದು ಮತ್ತೆ ಪ್ರಯತ್ನಿಸುವೆ ನನ್ನ ಛಾಪನ್ನು ಮೂಡಿಸೇ, ಉಳಿಸೇ..
ನಾ ಸಮುದ್ರದ ಅಲೆಯ ಮಾದರಿ,
ನಿಲ್ಲೆನು ಎಲ್ಲು, ನಿಲ್ಲಲಾರೆನು ಎಲ್ಲು...

ದಡವೇ ತೊರೆಯಿತು ಎನ್ನ, ಏನು ಮಾಡಲಿ ನಾ ಇನ್ನ
ದೇವರೆ ಬಲ್ಲ ಎನ್ನ, ನಾ ಅರಿತಿಲ್ಲವಲ್ಲ ನನ್ನ
ಕಣ್ಣಿಲ್ಲವಾದರು ಕನಸಕಂಡೆ, ಕಾಲಿಲ್ಲವಾದರು ಮುಂದೆನಡೆದೆ
ಆದರೂ ಗುರುತಿಸುತ್ತಿಲ್ಲವಲ್ಲ ನನ್ನ ಶ್ರಮವ ಈ ಜಗವು..
ಆದರೂ ನಾ ಬರುವೆ ಮುಂದೆ, ಆಗುವೆ ನಾ ಮಾದರಿ ಈ ಜಗಕೆ
ಹಠಮಾರಿ ನಾನು ಬಿಡೆನು ನನ್ನ ಹಠವ, ಛಲವ
ಮಾಡುತಲಿರುವೆ ನಿರಂತರ ಪ್ರಯತ್ನವ,
ನನ್ನ ಛಾಪನ್ನು ಮೂಡಿಸಲು ಈ ಜಗದಲಿ
ನಾ ಸಮುದ್ರದ ಅಲೆಯ ಮಾದರಿ,
ನಿಲ್ಲೆನು ಎಲ್ಲು, ನಿಲ್ಲಲಾರೆನು ಎಲ್ಲು...



© All Rights Reserved