...

2 views

ಬದುಕಿನ ದಾರಿ
*ಅವಕಾಶ*

ಸಿಕ್ಕಾಗ ರೆಕ್ಕಿ ಬಿಚ್ಚಿ ಸ್ವೀಕರಿಸಿ ಬಿಡು
ಸೊಕ್ಕಿನಿಂದ ದಿಕ್ಕರಿಸಬೇಡ
ತಕ್ಕುದಾದ ಬದುಕು ಬಂಗಾರವಾಗುವ ವೇಳೆಯಲಿ
ಕೊಕ್ಕೆ ಹಾಕಿ ಬಿಕ್ಕಳಿಸಬೇಡ...

*ದಾರಿ*

ಆ ದಾರಿ ಈ ದಾರಿ,
ನಿನ್ನ ಹರದಾರಿ
ಉಳಿದವಗೆ ಬಾರಿಸಲಿ ಹೊನಲಿನ ನಗಾರಿ
ಕಾಯಕವೊಂದೆ ಸಗ್ಗಕ್ಕೆ ದಾರಿ..

*ಪ್ರಹಸನ*

ಇಲ್ಲಿ ಬಣ್ಣಕ್ಕಿಲ್ಲ ಕೊರತೆ
ಉದರ ಕಾರಣವೋ
ಕಾಂಚಾಣ ಕಾರಣವೋ
ದಾಹದೊಂದಿಗಿನ ಮೋಹ ಕಾರಣವೋ
ಇದು ನಿತ್ಯ ನಿಲ್ಲದ ಪ್ರಹಸನ
ಬದುಕಿಗಂಟಿದ ಬಿಡದ ವ್ಯಸನ..

*ಹಿತ ಶತ್ರು*

ಅಜಾತಶತ್ರು ಆಗಬೇಕೆಂಬ
ಆಸೆ ನನಗೂ ಇದೆ
ಹಾಗೆಂದುಕೊಂಡು ಬದುಕಿದಾಗೆಲ್ಲ
ಕಡ್ಡಿಯಾಡಿಸುವ ಮಿತ್ರನೂ ಅಲ್ಲದ
ಶತ್ರುನೂ ಅಲ್ಲದ ದೊಡ್ಡ ಪಡೆಯೂ ಇದೆ..

*ಗಾಯ*

ಹುಸಿಯ ನುಡಿದರು
ಹಸಿಯ ಮಾಡಿದರು
ಹೊಸಿಕಿ ಹಾಕಿದರು
ಆರಿತ್ತು,ಎಲ್ಲ ಮರೆತ್ತಿತ್ತೂ
ಮತ್ತದೇ ಮಾತಿಗೆ ಗಾಯವಾಗಿತ್ತು..

*ರಮೇಶ್ ಹಡಪದ*