ಪಯಣ
ಒಂದೇ ಒಂದು ಬಾರಿ ಹೊರಡು ರೈಡು ,
ಮನದೊಳಗೇ ಗುನುಗುತಲಿದೆ ಹಾಡು ,
ಸ್ಟೆಪ್ಪು ಒಂದಾದರೂ ನೀ ಹಾಕಿ ನೋಡು,
ಮುಂದೆಂದೂ ಇರದು ಗೊಣಗುವ ಪಾಡು .
ನಮ್ಮ ಲೈಫು ನಮ್ಮದಿಲ್ಲಿ ನಾಲ್ಕು ದಿನ ,
ಮನ ಸಂಸಾರಕೆಂದೇ ದುಡಿವುದು ಪ್ರತೀ ಕ್ಷಣ ,
ಪ್ರೀತಿ ವಿಶ್ವಾಸದಲಿ ಬದುಕು ನೀ ಅನುದಿನ ,
ಆ ದಿನದ ಆಟ ನೆನೆದು ನಗುವುದು ಮನ .
ನಲಿ ನಲಿದು ಬದುಕನು ನೀನು ,
ಅನುಭವಿಸಲು ಅಳುಕೇಕಿನ್ನೂ ?
ಮಕ್ಕಳಿಗೆ ಹೇಳಲೊಂದೂ ಕಥೆ ಬೇಡವೇನು ,
ಮಾಡು ನೀ ಒಂದಾದರೂ ಎಡವಟ್ಟನ್ನು .
ಲೈಫು ಇಲ್ಲಿ ಫುಲ್ ಆಫ್ ಸಸ್ಪೆನ್ಸ್ ,
ನಾಳೆಗೆ ಪ್ಲಾನು ಮಾಡೋದೇ ನಮ್ಮ ವೀಕ್ನೆಸ್ .
ಮುಂದಿನ ಬದುಕು ಇಲ್ಲಿ ಹೇಗೋ ಏನೋ ,
ಸೋ , ಬಿಡದೇ ಬದುಕು ನೀ ನೀನ್ನ ನಾಟೀ ನೆಸ್....
written by :-
Tejas s Rao