...

18 views

ಮಳೆಗಾಲ - 1
ಗುಡುಗುಡುಗುಡುಗುಡುಗುಡುಗುಡು
ಗುಡುಗು ಗುಡುಗುತಿದೆ
ಸಿಡಿಸಿಡಿಸಿಡಿಸಿಡಿಸಿಡಿಸಿಡಿ
ಸಿಡಿಲು ಸಿಡಿಯುತಿದೆ
ಗುಡುಗುಡುಗುಡುಗುಡುಗುಡುಗುಡು
ಗುಡುಗು ಗುಡುಗುತಿದೆ
ಸಿಡಿಸಿಡಿಸಿಡಿಸಿಡಿಸಿಡಿಸಿಡಿ
ಸಿಡಿಲು ಸಿಡಿಯುತಿದೆ............................................

ಬಿಡದಂತಿರೋ ಈ ಮಳೆಯಲ್ಲಿ
ಬಿರುಗಾಳಿಯು ಬೀಸುತಿದೆ
ಭೀತಿಯೂ ಹೆಚ್ಚಾಗುತಿದೆ
ಮಿಂಚಿನ ಓಟವು ಭೀಕರವಾಗಿ
ನಡುಕವು ಹುಟ್ಟಿದೆ ಎದೆಯೊಳಗೆ...........................

ಕಾರ್ಮೋಡ ಕವಿದು
ವರುಣನ ಅಬ್ಬರ ಮಿತಿ ಮೀರಿ
ನಡೆಯಲು ಅವನ ಆರ್ಭಟ.................................

ಮಳೆಯ ಭೋರ್ಗರೆತ
ಗುಡುಗು ಸಿಡಿಲು
ಬಿರುಗಾಳಿ ಬೀಸಿದೆ
ಮರಗಳು ಉರುಳಿದೆ
ಕೆರೆಯ ಕಟ್ಟೆ ಕುಸಿದು
ನುಗ್ಗಿದೆ ನೀರು ಮನೆಮನೆಗೆ
ಜನರ ಜೀವನ ಕಂಗಾಲಾದರೂ
ಮುಂದೆ ದಾರಿಯೂ ಕಾಣದಾದರೂ..
_______________________________________

ಗುಡುಗುಡುಗುಡುಗುಡುಗುಡುಗುಡು
ಗುಡುಗು ಗುಡುಗುತಿದೆ
ಸಿಡಿಸಿಡಿಸಿಡಿಸಿಡಿಸಿಡಿಸಿಡಿ
ಸಿಡಿಲು ಸಿಡಿಯುತಿದೆ............................................

ಅಕಾಲಿಕ ಮಳೆಯಲ್ಲಿ
ಆತಂಕವೂ ಹೆಚ್ಚಾಗಿ
ಆಸರೆ ಅರಸಿ ಪರದಾಟ
ಆಸರೆ ಆಸೆಯ ಹುಡುಕಾಟ..................................

ಕೊಳವು ತುಂಬಿ
ಹೊಳೆಯು ಹರಿದು
ಎಲ್ಲ ಜೀವನ ಅಸ್ತವ್ಯಸ್ತವು
ಅಂತ್ಯವಾಗದ ಕರಾಳ ದಿನವು...............................

ಮಳೆರಾಯನ ಜೊತೆಯಲ್ಲೇ
ಜವರಾಯನು ಬರುತಿರಲು
ಆಘಾತವು ಎದುರಾಗಿ
ಎತ್ತ ಕೇಳಿದರೂ ಚೀರಾಟ
ಎತ್ತ ಕಂಡರೂ ನರಳಾಟ.......................................

ಆದರೂ ಕಾರ್ಮೋಡ ಕವಿದು
ಮಳೆಯ ಭೋರ್ಗರೆತ
ಗುಡುಗು ಸಿಡಿಲು
ಬಿರುಗಾಳಿ ಬೀಸಿದೆ ನಿರಂತರ................................
© chethan_kumar