...

9 views

ಪ್ರತಿಭಾ ಕಾರಂಜಿ ಮತ್ತು ಶಿಕ್ಷಣ
ಮಕ್ಕಳಲ್ಲಿ ಸುಪ್ತವಾಗಿ ಅಡಗಿರುವ ಪ್ರತಿಭೆಗಳನ್ನ....
ಶಿಕ್ಷಕರು ಹೊರತೆಗೆಯುವರು ಅಪ್ರತಿಮರನ್ನ....!

ಮಕ್ಕಳ ಮತ್ತು ಶಿಕ್ಷಕರ ಬಾಂಧಾವ್ಯದ ಗೋಡೆ.....
ಇಮ್ಮಡಿಯಾಗುವುದು ಪ್ರತಿನಿತ್ಯ ನೋಡೆ.....!!

ಹೊಸ ಹೊಸ ಪ್ರತಿಭೆಯ ಮಕ್ಕಳನ್ನು ಹುಡುಕುತ....
ಅವರಲ್ಲಿರುವ ಆಗಮ್ಯ ಬುದ್ಧಿಶಕ್ತಿಯನ್ನು ಹೊರಹಾಕುತ.....!!!

ಉನ್ನತ ಮಟ್ಟಕ್ಕೆ ತರುವರು ಪ್ರಚೋದನೆಯಿಂದ.....
ಮಕ್ಕಳಲ್ಲಿ ಉತ್ಸಾಹ, ಉಲ್ಲಾಸ ತುಂಬುತಾ ಪ್ರೇರಣೆಯಿಂದ......!!!!

ತಂದೆ -ತಾಯಿ ಮತ್ತು ಗುರುಗಳು ಬದುಕಿನಲಿ ನೀಡುವರು ಉತ್ತಮ ಶಿಕ್ಷಣ.....
ಈ ಮೂವರು ಮರೆಯಲಾಗದು ಅನುಕ್ಷಣ.....!!!!!

ಶಿಕ್ಷಕರ ಶಿಕ್ಷಣದಲ್ಲಿ ಆಗುವರು ಗುಲಗಂಜಿ....
ಮುಂದೆ ಸಾಗುತ ದೊಡ್ಡ ಸ್ಥಾನ ಅಲಂಕರಿಸಿ ಮಿನುಗುವರು ಅಪರಂಜಿ....!!!!!

ಮರೆಯಲಾಗದು ಆ ದಿನಗಳ ನೆನಪಿನ ಪ್ರತಿಭಾ ಕಾರಂಜಿ.....
ಮರುಕಳಿಸಲಿ ಆಗಾಗ ಆ ಸವಿ ಸವಿ ನೆನಪಿನ ಸಿಹಿ ಸಿಹಿ ಗಂಜಿ...!!!!!!

-LK. DVG. 💐😊