...

8 views

ಕರೋನ

ಕರೆಯದೇ ಬಂದಿರುವ ಓ ಅತಿಥಿಯೇ,
ಉಪಚರಿಸುವ ಸಂಪ್ರದಾಯ ನಮ್ಮದು ತಿಳಿದಿದೆಯೇ.
ನಿನಗೆಂದೇ ವಿಶೇಷ ತಂಡವನು ಕಟ್ಟಿಹೆವು,
ನಿನ್ನ ಆತಿಥ್ಯಕ್ಕೆ ಲೋಪ ಬಾರದಂತೆ ಕಾಯುವೆವು.

ಹೊರಬಂದಿಲ್ಲ ನಾವು ನೀ ಬರುವೆ ಎಂದು ಕಾಯುತಲಿ,
ಕರ ತೊಳೆಯುತಲೇ ಇರುವೆವು ನೀ ಸ್ವಚ್ಚತೆಯ ಬಯಸಿದಲ್ಲಿ.
ನಿನಗಾಗೇ ಕಂಡು ಹಿಡಿಯುತಲಿಹೆವು ಹೊಸಬಗೆಯ
ಉಪಚಾರ, ಮೂಲಿಕೆಗಳಲ್ಲಿ!
ಆದರೂ ನರಬಲಿಗಳನು ಪಡೆಯುತಲಿಹೆ ತಪ್ಪಲ್ಲವೇ ಈ ಕ್ಷಣದಲ್ಲಿ......

ನಮ್ಮ ಮನೆಯಲ್ಲೇ ನಮ್ಮನ್ನು ಬಂಧಿಸಿಹೆ ,ಓ ಕರೋನ
ಆದರೂ ಅನಿಸುತಿದೆ ನಿನಗೊಂದು ಸಲಾಮ್ ಹೊಡೆಯೋಣ.
ತನ್ನವರೊಂದಿಗೆ ಕಳೆಯಲು ಕಾಲ, ಮಾಡಿಹೆ ನೀ ಅನುಕೂಲ
ಆದರೂ ತಿಳಿದಿದೆಯೇ ? ನಿನ್ನ ಆಯಸ್ಸಿಲ್ಲಿ ಮಿತಕಾಲ.

ಧನ್ಯವಾದವನು ಸೂಚಿಸಲು ಕರ ತಟ್ಟಿಹೆವು ನಮ್ಮ ಜನಕೆ,
ನಿನ್ನ ಆಗಮವ ತಿಳಿಸಲು ಬೀದಿಯಲಿ ನಿಂತಿಹ ಪಂಗಡಕೆ,
ಕ್ಷಣಕ್ಷಣದಿ ನಿನ್ನ ಬಗೆಗಿನ ಮಾಹಿತಿ ನೀಡುವ ಆ ಜನಕೆ,
ಹೊರಬರದೆ ಮನೆಯಲಿರಿ ಎಂದು ನುಡಿದಿಹ ಹಿತೈಷಿ ವೃಂದಕ್ಕೆ.

written by:- Tejas s rao🙃