...

6 views

ಅಟ್ಟಕ್ಕೇರಿಸಿದರು ಚಟ್ಟ ಕಟ್ಟಿದರು
ಅಟ್ಟ

ತಿಂದು ತೇಗಿದವರೆಲ್ಲ
ತಿರುಗಿ ನೋಡರು
ತಿದ್ದಿ ತೀಡುವ ಬದಲು
ತಿನ್ನುತ್ತ, ಮೇಯಿಯುತ್ತ, ಅಟ್ಟಕ್ಕೇರಿಸಿದರು


ಚಟ್ಟ

ಎಲ್ಲೆ ಮೀರಿದವರಿವರು
ಎಲೆ ಮರೆ ಕಾಯಿಯೊಳಗಿನ ಜೀವಕೆ
ಎಗ್ಗಿಲ್ಲದೇ ನುಗ್ಗಿಸಿದರು ನೋವ ಬಾಣವ
ಎತ್ತ ಸರಿದರೂ ಬಿಡದೇ ಕಟ್ಟಿದರು ಚಟ್ಟವ

ಪಟ್ಟ

ಪಟ್ಟು ಬಿಡದೇ
ಪಟ್ಟು ಹಾಕಿದರು
ಪಟ್ಟು ಬಿಡದ
ಪಟ್ಟಬದ್ದ ಹಿತಾಸಕ್ತರು

ಮಟ್ಟ

ಬುದ್ದನಂತಿರದೇ
ಬದ್ದವಾಗಿರದೇ
ಭಯಬಿದ್ದರಿವರು
ಬಯಲೊಳಗೆ ಮಟ್ಟಹಾಕಿದವರು..

ಸುಟ್ಟು ಹಾಕಿದರು

ಕಣ್ಮುಂದಿರುವ ಸಾಕ್ಷಿಗೆ
ಕಾಣದಂತೆ ಹೊಸಕಿದರು
ಕಿಂಚಿತ್ತು ಕದಲದೇ
ಕಲ್ಲಾಗಿ ನಡೆದವರು..


*ರಮೇಶ್ ಹಡಪದ*