...

5 views

ಹಂಬಲ..
ಹರಕೆಯ ಕಟ್ಟಿ ಹಂಬಲಿಸಿ ಹಡೆದೆ ನಾನಂದು
ತಟ್ಟೆ ಹಿಡಿದು ಕೂತಿರುವೆ ಗತಿಯಿಲ್ಲ ಯಾರಿಂದು
ಒಲವ ಒಗ್ಗರಣೆ ಹಾಕಿ ಬೆಳೆಸಿದ ಮಕ್ಕಳಿಲ್ಲ ಇಂದು
ಹೊತ್ತಿನ ಕೂಳಿಗೂ ಗತಿಯಿಲ್ಲದ ಬಾಳು ನಂದು...

ಆಸರಿಕೆ ಬ್ಯಾಸರಿಕೆ ಕಾಣಲಾರದ ಜೀವ ನನದು
ಸಂಬಂಧಗಳು ಸತ್ತಾಗ ವಾತ್ಸಲ್ಯಕೆ ಬೆಲೆ ಸಿಗದು
ಕಣ್ಣೀರೂ ಕಾರಣ ಕೇಳಿದೆ ಯಾಕಳುವೆಯೆಂದು
ನಗುವಿನಾಸರೆ ಬೇಕಿದೆ ಮುಪ್ಪಾದ ಜೀವಕಿಂದು..

ಮಕ್ಕಳ ಆಸರೆಯಿಲ್ಲದ ಖಾಲಿಯಾದ ಜೋಪಡಿ
ಕಂಡರೂ ಕಾಣದಂತಿಹರು ನಾನ್ಹೆತ್ತ ಕರುಳ ಕುಡಿ
ತಾಳಿ ಮಾಲೀಕನೂ ಬಿಟ್ಹೋದ ಮಾಡಿ ಗಡಿಬಿಡಿ
ಉಸಿರು ಕೂಡ ನಗುತಿದೆ ನನ್ನಯ ಐಸಿರಿ ನೋಡಿ..

ದೇವರಿಗೂ ಕಾಣದಾಗಿದೆ ನನ್ನ ಭಿಕಾರಿ ಬದುಕು
ನಾ ಬಾಡುವ ಮುನ್ನ ಕರುಳಬಳ್ಳಿ ನೋಡಬೇಕು
ಹಸಿವಿಗೂ ಸಾಕಾಗಿದೆ ನೋಡಿ ಜಗದ ದಿಮಾಕು
ಬೇರೇನೂ ಬೇಕಿಲ್ಲ ಕರೆದುಕೊ ನನಗಿನ್ನು ಸಾಕು..

#Kannada #Kannadaquote #vijaykumarvm #ವಿಬೆಣ್ಣೆ

© ವಿಜು ✍ 💞