...

21 views

❤ ಒಲವ ಚಂದಿರ ❤
ಬಾನಂಗಳದಿ ಹೊಳೆಯೊ ಒಲವಿನ ಚಂದಿರ
ಹೃದಯದಿ ಮೂಡಿದೆ ಅರಿಯದೆ ಪ್ರೇಮಾಂಕುರ
ಮನಸಿನ ಪಿಸುಮಾತು ಹೇಳುವೆ ತದನಂತರ
ಕಾಯುತ್ತಿರುವೆ ನಿಷ್ಕಲ್ಮಶ ಪ್ರೀತಿಗೆ ನಿರಂತರ |1|

ಜೊತೆಯಾಗಿ ಆಡೋಣ ಸವಿಯಾದ ನುಡಿಯ
ನಕ್ಕು ನಲಿಯುತ ಮರೆಯೋಣ ಕಡಲ ತಡಿಯ
ಸಮಯ ಕಳೆಯೋಣ ಹೀಗೆ ನಲ್ಮೆಯ ಒಡೆಯ
ನನಗಾಗಿ ನೀಡುವೆಯಾ ಒಲವಿನ ಉಡುಗೊರೆಯ|2|

ನೋಡುತ ಕಾಯುತ್ತಿರುವೆ ನಿನಗಾಗಿ ನಾನು
ನೀ ನಕ್ಕರೆ ಭುವಿಯು ಸಿಹಿಯಾದ ಹಾಲುಜೇನು
ನನಗಾಗಿ ಧರೆಗಿಳಿದು ವರಿಸುವೆಯ ನೀನು
ಬೆಳದಿಂಗಳ ರಾತ್ರಿಯಲಿ ಮಿನುಗುವುದು ಬಾನು|3|

ನಿನ್ನ ಸುತ್ತಲು ಆವೃತವಾಗಿದೆ ಕೋಟಿ ತಾರೆಗಳು
ರೆಪ್ಪೆ ಬಡಿದು ನಗುತ್ತಿದೆ ನನ್ನ ತುಂಟ ಅಧರಗಳು
ತಂಗಾಳಿಯ ಸ್ಪರ್ಶಕೆ ಹಾರುತ್ತಿದೆ ಮುಂಗುರುಳು
ಆರಾಧಿಸುತ್ತ ಧ್ಯಾನಿಸುವೆ ಕಾಣದ ಮನಸಿನೊಳು|4|

ಬೆಳದಿಂಗಳ ಚೆಲ್ಲುವ ಹುಣ್ಣಿಮೆಯ ಚಂದಿರ
ಹೃದಯದ ಕಡಲುಕ್ಕಿಸಿ ಸೆಳೆಯುವ ಚೆಂದದ ಚತುರ
ಅಮವಾಸ್ಯೆ ಕವಿದಾಗ ಕಣ್ಣಿಗೆ ಕಾಣದ ಸುಂದರ
ಕಂಬನಿ ತರಿಸುವಂತೆ ಕೊಡುವೆ ಮನಕೆ ತುಸು ಬೇಸರ|5|

ಅಂಬರಕ್ಕೆ ಹಾಕಿರುವೆ ಬೆಳಕಿನ ಹಂದರ
ನೀ ಬರುವ ಹೊತ್ತಲ್ಲಿ ಮಾಡಿಕೊಳ್ಳುವೆ ಚೆಂದದ ಸಿಂಗಾರ
ನೆನಪಾಗಿ ಬಂದು ಸೇರುವೆಯಾ ಹೃದಯ ಮಂದಿರ
ಬಾಳುವೆ ನಿನ್ನ ಜೊತೆ ನೆಮ್ಮದಿಯ ಸುಖ ಸಾಗರ|6|
✍️ಶೃತಿ ಶೈವ

#WritcoQuote#writcoapp#Writer#Writco#shruthishaiva#Writcopoem#ಒಲವಚಂದಿರ#ಪ್ರೀತಿ#ಚಂದಿರ