...

14 views

ಅಶುಕವನ..
ಕಾರಣ ಬೇಕಿರಲಿಲ್ಲ ಅಂದು ಜೊತೆಯಾಗಿ ನಲಿಯಲು
ಇಂದೇಕೋ ರೋಧಿಸುತಿದೆ ನಿನ್ನಗಲಿಕೆಯಿಂದ ಒಡಲು
ಕಳೆದ ಕ್ಷಣಗಳಿಗೂ ಬಳಲಿಕೆಯಂತೆ ನಿನ್ನ ಕಾಣದಿರಲು
ಮತ್ತೆ ಉಸಿರಿಗೆ ತುಸು ಹಸಿರಾಗು ನಾನಿರುವೆ ಕಾವಲು...

ಹಕ್ಕಿಯಂತೆ ಸ್ವಚ್ಛಂದವಾಗಿ ಹಾರಾಡುತಿದ್ದೆವು ಅಂದು
ರೆಕ್ಕೆ ಕಿತ್ತಿದ ಹಕ್ಕಿಗಳಂತೆ ಸೋತು ಹೋದೆವು ಇಂದು
ಕಟ್ಟಿದ ಕನಸುಗಳು ಕಮರಿದವು ಮನದಲೇ ಬೆಂದು
ಕತ್ತಲೆ ಕಾನನದಿ ದಾರಿ ಹುಡುಕುತಿದೆ ಬದುಕು ನೊಂದು...

ಹರುಷದಿ ಮೆರೆದಾಡಿದ ದಿನಗಳಿಂದು ಮರೆಯಾದವು
ಹಸಿವನೇ ಮರೆತು ಕಳೆದ ಕ್ಷಣಗಳು ನೆನಪಾಗುತಿಹವು
ಕಣ್ಣ ಹನಿಗಳೂ ಜಾರಲು ನಿನ್ನ ಅನುಮತಿ ಕೇಳುತಿಹವು
ಮತ್ತೆ ಮತ್ತೆ ನಿನ್ನಯ ನೆನಪುಗಳು ಜೀವ ಹಿಂಡುತಿಹವು..

ನಿನ್ನ ಅಗಲಿಕೆಯ ಅರಗಿಸಿಕೊಳ್ಳಲಾಗದೆ ಸೋತಿಹೆನು
ನೆನಪುಗಳ ಬುತ್ತಿ ಬಿಚ್ಚಿ ನಿನಗಾಗಿಯೇ ಕಾಯುತಿಹೆನು
ಹೃದಯ ಬರಿದಾಗಿಸಿ ಬಡ ಬಡಿಸುತ ಬದುಕುತಿಹೆನು
ನಿನ್ನನು ಸೇರಲು ಕೊನೆಯ ದಿನಗಳನ್ನ ಎಣಿಸುತಿಹೆನು...

#Kannada #kannadapoem #vijaykumarvm #ವಿಬೆಣ್ಣೆ
© ವಿಜು ✍ 💞