...

7 views

ಪಯಣ
ಬಾಳ ಪಯಣದ ಪಯಣಿಗರು ನಾವು
ಸುಖಃ ಶಾಂತಿ ಹಂಚುತ ಸಾಗೋಣವೆ
ದ್ವೇಷ ಮತ್ಸರಗಳ ಮರೆಸೋಣವೆ
ಬದುಕು ದೇವರು ಕೊಟ್ಟ ಬಿಕ್ಷೆಯಲ್ಲವೆ

ಬದುಕಿನ ಯಾನದಲ್ಲಿ ಅದೆಷ್ಟೋ ನಿಲ್ದಾಣ
ಎಲ್ಲವನು ಬಿಟ್ಟು ಸಾಗೋಣ
ದಾರಿಯ ಮದ್ಯೆ ಕೆಲವು ಅನಿರೀಕ್ಷಿತ ತಿರುವುಗಳು
ಹೇಳದೆ ಉಳಿಯುವ ಹಲವಾರು ಆಕಾಂಕ್ಷೆಗಳು

ಕೊನೆಯ ನಿಲ್ದಾಣದಿ ವಿದಾಯ ಹೇಳಲೇಬೇಕು
ಪ್ರೀತಿ ಪಾತ್ರರ ಬಿಟ್ಟು ಹೋಗಲೇಬೇಕು
ಎಲ್ಲರಂತೆ ಸ್ಮಶಾನ ಸೇರಲೇಬೇಕು
ನಮ್ಮದಲ್ಲದ ಜಾಗವ ಬಿಟ್ಟು ತೆರಳಲೆ ಬೇಕು

ರಾಧಾ
© Radha