ಕೋರೋಣ ಪರಿಪಾಠ
ಫಳ ಫಳ ಹೊಳೆಯುವ ಸೂರ್ಯನ ಕಿರಣದಿ.
ಜಗದ ಪ್ರತಿ ಜೀವಿಗಳ ಸುಖದ ಜೀವನದ ಪಯಣದಿ.
ದಿಗಿಲು ತರಿಸಿತು ಇದ್ಯಾವ ಕೋರೋಣ ಕೆಡಿಸಿತು ಜಗದ ನೆಮ್ಮದಿ.
ಯಾವ ಮನುಜನು ತರುವನೋ ಇದಕ್ಕಿಲ್ಲಿ ವಿನಾಶದ ಔಷದಿ.
ಕಾಣಲಾರೆನಾ ದೇಶ ದೇಶಕೂ ಹಬ್ಬಿದ ಕೊರೊನದ ಘೀ ಳು.
ಪರಿತಪಿಸುತ್ತಿರುವರು ತಡೆಗಟ್ಟಲು ಜೋಡಿಸುತ ತಮ್ಮ ತಮ್ಮ ಕೈ ತೋಳು.
ಇನ್ನೆಷ್ಟು ಜನರ ಬಲಿ ತೆಗೆದುಕೊಳ್ಳುವುದೋ ಈ ಜಗದೊಳು.
ಉಸಿರಾಟದಿ ಬಂದು ಹರಿಹಾಯ್ದು ಕೊಲ್ಲುತಿದೆ ಜನರ ಕೊರಳು.
ಭೂಮಿಗೆ ಅಂಟಿಕೊಂಡಿತು ಕಂಡು ಕಾನರಿಯದ ಕೋರೋಣ ರೋಗ.
ಇಲ್ಲೆಯೇ ಇತ್ತ? ಇದಕೆ ಸಾವುಗಳ ಸರಮಾಲೆಯ ಕೊಂಡೊಯ್ಯುವ ಜಾಗ.
ಹಬ್ಬುತ್ತಿದೆ ಜನರ ಜನರಿಗೂ ದೇಶ ದೇಶಕೂ ತುಂಬಾ ಸರಾಗ.
ವೈದ್ಯ ದಾದಿಗಳು ಚಡಪಡಿಸುತ್ತಿರುವರು ಜನರ ಉಳಿಸಲು ಕೊಡುತ ತಮ್ಮ ಪರಿತ್ಯಾಗ.
ನಿದ್ದೆಗೆಡಿಸಿತು ಸುಳಿಸುಳಿದಾಡುತ ಬಂದು ಕೊರೊನದ ಕಾಟ. ...