ಅಲೆಮಾರಿ..
ಪರಪಂಚ ಅರಿಯುವ ಮುನ್ನವೇ ನಾನಾದೆ ಅಲೆಮಾರಿ
ದಿಕ್ಕು ದೆಸೆಗಳಿಲ್ಲದ ನನ್ನೀ ಬದುಕಿಂದು ಜೀವಂತ ಗೋರಿ
ಬೀದಿ ಬದಿಯ ಜೀವನಕೆ ಸುಂದರ ಮನಸೇ ಸಹಕಾರಿ
ತೆಗಳದಿರಿ ಸ್ಥಿತಿವಂತರೆ ನಾನೊಬ್ಬ ಸುಮನಸಿನ ಭಿಕಾರಿ..
ನಾ ಮಾಡದ ತಪ್ಪಿಗೆ ನಾನರಿಯೆ ನನಗೇಕೋ ಈ ಶಾಪ
ನನಗೂ ಮನಸುಂಟು ತೋರದಿರಿ ನನ್ನ ಮೇಲೆ ಕೋಪ
ದೇವನೇ ನೀನೇ ಹೇಳಿಬಿಡು ನಾ ಏನು ಮಾಡಿದೆ ಪಾಪ
ಸುಂದರ ಮನಸ್ಸಿನ ನನ್ನಲ್ಲೂ ಕನಸುಗಳಿವೆ ಅಪರೂಪ..
ಅಮ್ಮನೆದೆ ಹಾಲಿನ ಸವಿಯ ಸವಿಯದ ಕೂಸು ನಾನು
ಅಪ್ಪನ ಹೆಗಲೇರಿ ಸಂಭ್ರಮಿಸದ ಸೂತಕದ ಸುತನಿವನು
ಸಿರಿವಂತಿಕೆ ಇರದಿದ್ದರೂ ಸು ಮನಸ್ಸಿನ ಮುಗ್ದನಿವನು
ಅನ್ನ ಅರಿವೆ ನೀಡಿ ಸಲಹುವವರ ದೇವರ ಮಗನಿವನು..
ನನಗೂ ಆಸೆಗಳಿವೆ ಅಪ್ಪಿಕೊಳ್ಳಲೊಂದು ಮನ ಬೇಕು
ಭಿಕಾರಿ ಬದುಕ ಹಸನಾಗಿಸಲು ಸಣ್ಣ ಬೆಂಬಲವೆ ಸಾಕು
ಬದುಕಲಿಂದು ಬಡಜೀವದ ಬೇಸರ ದೂರಾಗಿಸಬೇಕು
ಬಡವ ಬಲ್ಲಿದನ ಬದುಕೂ ನೆಮ್ಮದಿಯನು ಕಾಣಬೇಕು..
#Kannada #Kannadaquote #vijaykumarvm #ವಿಬೆಣ್ಣೆ
© ವಿಜು ✍ 💞