...

9 views

ಪ್ರೇಮದ ಕರಾರು...
ನಿನ್ನ ಅಂದವನ್ನು
ಬೆಳಗಲು ಸೂರ್ಯ
ಪ್ರತಿ ಬೆಳಿಗ್ಗೆ ಬರುವನಂತೆ

ನಿನ್ನ ಚೆಲುವನು
ಕಾಣಲು ಚಂದ್ರ
ಪ್ರತಿ ರಾತ್ರಿ ಬರುವನಂತೆ

ಇವರನ್ನು ತಡೆ ಹಿಡಿಯಲು
ನನ್ನಿಂದ ಆಗದಿದ್ದರೂ

ನಿನ್ನನ್ನು ಬಚ್ಚಿಡುವ
ವ್ಯವಸ್ಥೆಯ ನಾ ಮಾಡಬಲ್ಲೆ

ನನ್ನ ಯೋಜನೆಯ ಪ್ರಕಾರ
ನನ್ನ ಪ್ರೇಮದ ಕೋಟೆಯೊಳಗೆ

ನಿನ್ನನ್ನು ಬಚ್ಚಿಡುವ
ಜವಾಬ್ದಾರಿ ನನ್ನದೇ ಆದರೂ

ನನ್ನ ನೀ ಪ್ರೇಮಿಸಬೇಕೆನ್ನುವ
ಸಹಿ ಹಾಕಿ ಕರಾರು ಮಾಡಿದರೆ ಸಾಕು...

~ #ನಾನ್ಯಾರು ✍️