...

5 views

ಕವಿತೆ
ಪ್ರತಿದಿನ ಕವನ ಕಳಿಸಬೇಕೆಂದು ಅವಳ ಕರಾರಿದೆ
ಆದರೆ ಇದಕ್ಕೆ ನನ್ನ ತಕರಾರಿದೆ
ಬಣ್ಣಗಳು ಅವಳನ್ನು ನೋಡಿ ತಮ್ಮನ್ನ ಅವಳಿಗೆ ಅರ್ಪಿಸಿಕೊಂಡಾಗಿದೆ
ಹೂಗಳು ಅವಳ ಕೋಮಲತೆ ನೋಡಿ ಅಸೂಯೆ ಪಟ್ಟಂತೆ ಕಾಣುತ್ತಿದೆ
ಗಾಳಿಯು ಅವಳನ್ನು ಸ್ಪರ್ಶಿಸಿ ತಂಗಾಳಿಯಾಗಿದೆ
ಚಂದ್ರನೂ ಕೂಡ ಅವಳನ್ನು ನೋಡಿ ಹೇಗೆ ಹೊಳೆಯಬೇಕೆಂದು ಕಲಿತಂತಿದೆ.
ಇನ್ನು ಅವಳನ್ನು ಯಾವುದಕ್ಕೆ ಹೋಲಿಸಿ ಕವನ ಬರೆಯಬೇಕೆಂದು ತಿಳಿಯದಾಗಿದೆ 💞