...

2 views

ಜಗತ್ತಿನ ಅದ್ಭುತ ಪರ್ವತ
ಚಿತ್ರ ಕವನ

ಶೀರ್ಷಿಕೆ: ಜಗತ್ತಿನ ಅದ್ಭುತ ಶಿಖರ
**********************************
ಅಲ್ಲೊಂದು ಹಿಮಾವೃತ ಮೇಲು ಶಿಖರ
ಕಣ್ಣಿಗೆ ನೋಡಲು ಬಲು ಸುಂದರ
ಸೂರ್ಯ ರಶ್ಮಿಯಿಂದ ಹೊಳೆಯುವ ಶೃಂಗಾರ
ಅಕ್ಷಿಗಳಿಗೆ ಗೋಚರಿಸುವ ಬಂಗಾರ//

ಜಗತ್ತಿನ ಮೂರನೇ ಅದ್ಭುತ ಪರ್ವತ
ಐದು ಶಿಖರಗಳನ್ನೊಳಗೊಂಡಿದೆ ಬಹು ಅಚ್ಚರಿಯುತ
ಹಿಮವನ್ನೇ ಒಳಗೊಂಡಿದೆ ಅತ್ಯಾಕರ್ಷಯುತ
ಪಂಚದೇವತೆಗಳ ಪ್ರತಿನಿಧಿಸುವ ಅನವರತ//

ಬಾನಿಗೂ, ಶಿಖರಕ್ಕಂಟಿದೆ ನಂಟು
ಕವಿಗಳಿಗೆ ಬಣ್ಣಿಸಲು ಪದಗಳ ನಿಘಂಟು
ಪೋಣಿಸುವ ಪದಗಳಿಗೆ ಒಲವುಂಟು
ಪ್ರಕೃತಿಯನ್ನು ಮೆಚ್ಚಿಸುವ ಅಂದವುಂಟು//

ಜನರ ವಿಹಾರ ತಾಣಕ್ಕೆ ಹೆಸರಾದ ಕಾಂಚನಜುಂಗಾ
ನೆಮ್ಮದಿ, ಸಂತಸ ತುಂಬಲು ಇಲ್ಲಿಲ್ಲ ಭಂಗ
ಪ್ರಯಾಣದಲ್ಲಿ ಮೂಡಿಸುವ ಭಾವನಾತ್ಮಕ ಪ್ರಸಂಗ
ನಿಷ್ಕಲ್ಮಶವಾಗಿ ಬಿಡುವುದು ನಮ್ಮ ಅಂತರಂಗ//

ಇತಿಹಾಸ ಪುಟದಲ್ಲಿ ಮಿಂಚಿದೆ ಶಿಖರದ ಸಾರ
ಪರ್ವತವೇರಿ ಮೆರೆದರು ಸಾಹಸದ ಓಂಕಾರ
ಭರವಸೆ ತುಂಬಿ ಹರಿಯುವ ಗಂಗಾ ಸಾಗರ
ಇದೇ ಕಾಂಚನಜುಂಗಾದ ಅದ್ಭುತ ಮಹಿಮೆ ಪ್ರಹಾರ//