...

4 views

ದಿನಚರಿ!
ದಿನಚರಿ (ಡೈರಿ) ಬರೆಯುವ,
ಹವ್ಯಾಸ ಇರಬೇಕಂತೆ!!
ನಮಗೆ ಅನಿಸಿದ್ದನ್ನು, 
ಗೀಚುವ ಹವ್ಯಾಸ ಒಳ್ಳೆಯದಂತೆ!!

ಏಕೆಂದರೆ ಬರೆದಿಟ್ಟ, ಪುಟಗಳನ್ನು
ಒಂಟಿ ಎನಿಸಿದಾಗ, 
ತಿರುವಿ ನೋಡ ಬೇಕಂತೆ!!

ನಾ ಬರೆದಿಟ್ಟ, ದಿನಚರಿಯ.
ಪುಟ ತಿರುವಿದಾಗಲೆ, 
ಅನುಭವವಾಗಿದ್ದು, ಎಷ್ಟು ಮುಗ್ಧ ನಾನು!!
ಅಂತೆಯೇ ಸ್ವಾಭಿಮಾನಿಯು ಕೂಡ..

ಏನೆಲ್ಲಾ ಬರೆದಿದ್ದೆ, ಅರ್ಥವಿಲ್ಲದ ಹಾಗೆ.
ನಕ್ಕು ಸಾಕಾಯ್ತು ಬಿಡಿ, ನೆನಪಿಲ್ಲ ಏನು.
ಆಗಲೇ ತಿಳಿದದ್ದು ಈ ಹುಚ್ಚು,
ಇಂದು ನೆನ್ನೆಯದಲ್ಲ, ಜನ್ಮಾಂತರದ್ದು!!!

ಬರೆದ ದಿನಗಳ ನೆನಪಿನಾಳಕ್ಕೆ ಇಳಿದು,
ಕಳೆದು ಹೋಗಿದ್ದೆ ಕ್ಷಣಕಾಲ,
ವಾಸ್ತವಿಕ ತೊಳಲಾಟ ಮರೆತು.

ಬರೆದಿಡಿ ದಿನಚರಿಯ ಒಳ್ಳೆ ಹವ್ಯಾಸವಂತೆ.
ತೆರೆದು ನೋಡಿರಿ, ಒಮ್ಮೆ ಕಾಡಿರಲು ಚಿಂತೆ!
© ಮಂಜುನಾಥ್.ಕೆ.ಆರ್