...

14 views

✨️ನೆನಪು✨️
ನೆನಪೊಂದು ನಲಿದಾಡಿದೆ
ನೆನಪಿನಂಗಳದಿ
ಬೆಂಬಿಡದೆ ಸುಳಿದಾಡಿದೆ
ಹಗಲಿರುಳು ಕಾಡಿದೆ

ಪರಿಹಾರವೇನೋ ತಿಳಿಯದು
ಏನಿಲ್ಲ ತೊಂದರೆ ಏಕೆಂದರೆ
ಸುಂದರ ನೆನಪದು
ಮರೆತರೂ ಮರೆಯಾಗದು

ಮನಕೆ ಹತ್ತಿರವಾಗಿಹುದು
ನಗುವನ್ನೇ ಹಿಂಬಾಲಿಸುವುದು
ನಿದ್ರೆಯಲ್ಲೂ ಕನಸಾಗಿಹುದು
ಬರೆಯುವಾಗ ಅಕ್ಷರವಾಗಿಹುದು

ಇರಬೇಕು ಜೀವನದಿ
ಒಂದಾದರೂ ಕಾಡುವ ನೆನಪು
ಮನಸಿನ ಹಗುರತೆಗೆ
ಮುಖದ ಮಂದಹಾಸಕ್ಕೆ ಜೊತೆಗೆಂದೂ

© ಭಾರ್ಗವಿ ವರ್ಧನ್*(ಭಾವ)*✍🏻
#ಭಾವಸಾಲುಗಳು #WritcoQuote