...

5 views

ಕಾರುಣ್ಯದ ಪೈರು
ಮುಂಗಾರು ಬಿದ್ದ ಕಾಲಕೆ
ಬಿತ್ತಿತ್ತು ಕಾರುಣ್ಯದ ಬೀಜ
ವರುಣಾರ್ಭಟ ಸರಿದ ಮೇಲೂ
ಭುವಿಯ ಗರ್ಭದಲ್ಲಿತ್ತು ವಾತ್ಸಲ್ಯದ ತೇಜ
ಮೊಳಕೆ,ಕಾಯಿಯಾಗಿ, ಹೂವಾಗಿ ಮುಡಿಗೂ ಏರಲಿಲ್ಲ ,ಪಾದಕ್ಕೂ ಬೀಳಲಿಲ್ಲ.

ಮತ್ತೆ ಎತ್ತ ಸರಿಯಿತು ಬೀಜ
ಕಾದು, ಕಾದು ಕಾಲವೂ ಕೂಲಿಯಾಯಿತು
ಕಾರುಣ್ಯ ಎತ್ತಲೋ ಒರಗಿ
ಬರೀ ಶೂನ್ಯವಾಯಿತು..

ನಳನಳಿಸಿ, ತಳಮಳವ ಇಳಿಸಿ,
ತಾ ನಗಿಸಿ,ನಗುವ ಚೆಲ್ಲುತ್ತಿತ್ತು
ಭೂಮಿ ತೂಕವ ಹೋಲುತ್ತಿತ್ತು..
ಭೂಮಿಗೂ ಅಂದ ತಂದಿತ್ತು
ಅದರ ಅಂದವೇ ಭೂಮಿಯೆಲ್ಲ ಮೆತ್ತಿತ್ತು..

ಇಳೆಯೊಳಗಾದರು ಬೆರೆತು
ಅದರ ಕಳೆ ಹೊಳೆಯಾಗಿ ಹರಿಯಲಿ
ಜುಳು ಜುಳು ನೀನಾದದಂತೆ
ಅಳು ಎಂದು ಸನಿಹವೇ ಸುಳಿಯದಂತೆ
ತಾ ಸರಿದಲೆಲ್ಲ ಹಬ್ಬಲಿ ನಗು ಲತೆಯಂತೆ..


*ರಮೇಶ್ ಹಡಪದ*