...

20 views

ಇಳಿಸಂಜೆ...
ಇಳಿಸಂಜೆಯಲಿ
ತಣ್ಣನೆ ತಂಗಾಳಿ ಸೋಕಿ
ನಿನ್ನೀ ಹಾಲ್ಬಣ್ಣದ
ಮೈಮಾಟ ನನ್ನ ಕೆಣಕಿ
ನಿನ್ನಾ ಕಂಕುಳ ಮಚ್ಚೆ
ನನ್ನನೇ ಅಣಕಿಸಿ
ಮನವ ಚಂಚಲಗೊಳಿಸಿ
ಬಯಕೆಯನು ಬಹುವಾಗಿ
ಕೆರಳಿಸಿದೆ ಹುಡುಗಿ..
ನನ್ನಾಸೆಗೆ ಕಡಿವಾಣ
ಹಾಕದೆ ಸಹಕರಿಸು.,
ಮತ್ತೇರಿದ ಮನಕೆ ಮುದನೀಡುತ
ಮೆದು ಎದೆಯ ಮೇಲೆರಗಿ
ಅಧರಗಳಲೇ ಚಿತ್ತಾರ ಬಿಡಿಸುತ.,
ಬೆವರ ಹನಿಯೊಂದು
ಎದೆಯ ತಿರುವಿನಲಿ ಜಾರಿ
ಹೋಗುವ ಹಾಗೆ
ಒಮ್ಮೆ ಕಸುವನೆಲ್ಲ
ಕರಗಿಸುವ ಕವಾಯತು
ನಡೆದು ಬಿಡಲಿ
ಸುಖವು ಸನ್ನೆ ಮಾಡಿ
ಉಸುರುವಂತೆ
ಒಮ್ಮೆಗೇ ನಾವಿಬ್ಬರೂ
ಸೋತು ಶರಣಾಗುವಂತೆ...

#Kannada #Kannadaquote #vijaykumarvm #ವಿಬೆಣ್ಣೆ #ಶೃಂಗಾರ
© ವಿಜು ✍ 💞