...

3 views

"ಕನ್ನಡ ನುಡಿ....
"ಕನ್ನಡ ಭಾಷೆಯು ಚಂದ
ನುಡಿಯಲು ಆನಂದ

ಕನ್ನಡವು ಪದಗಳಲಿ
ಅಳಿಸಲಾಗದ ಸ್ವರಮಾಲೆ

ಕನ್ನಡ ನುಡಿದಿರೆ
ಮನವು ತಣಿದಿರೆ

ಹೃದಯದಿ ತಿಳಿಯದ
ಆನಂದವು

ಹಚ್ಚೋಣವೆ ಕನ್ನಡದ ದೀಪವಾ
ಸಿರಿನುಡಿಯ ದೀಪವಾ

ಕನ್ನಡ ನುಡಿ ಕುಣಿದಾಡಿದೆ
ಮನದಿ

ಕನ್ನಡ ನಾಡಲಿ ಹರಿಯುವ
ಈ ಕಾವೇರಿ ನದಿ

ಮಿಂದು ಮೆರೆಯೋಣವೇ
ಇಲ್ಲಿ

ಬಾಳಲ್ಲೊಮ್ಮೆ ಈ
ಜೀವನದಿಯಲ್ಲಿ

ಕನ್ನಡವೇ ಸತ್ಯವು
ಕನ್ನಡವೇ ನಿತ್ಯವೂ

ನುಡಿಗಳಲಿ ಬರಹದಲಿ
ನಾನಾ ಕವಿಗಳು

ಬರೆದಿಹರು ವರ್ಣಿಸಿಹರು
ಓದಲು ಮನಕಾನಂದ

ಕನ್ನಡ ನುಡಿಯಲು ಚೆಂದ
ಕೇಳಿರೆ ಕನ್ನಡವೇ ಅಂದ..,
🙏shobha 💐