...

12 views

*ಅವಳು*
ಅವಳು ನೋವ ನುಂಗುವವಳು
ಅವಳು ಮನೆ ಮನವ ಬೆಳಗುವವಳು

ಸಹೋದರಿಯಾಗಿ ಧೈರ್ಯ ತುಂಬುವಳು
ಮಗಳಾಗಿ ಮನೆಗೆ ಶೋಭಿತಳು

ಮಡದಿಯಾಗಿ ಸದಾ ಜೊತೆಗಿರುವಳು
ತಾಯಿಯಾಗಿ ವಾತ್ಸಲ್ಯ ತೋರುವವಳು

ಇಳೆಗೆ ಹೋಲಿಕೆಯೇ ಇವಳು
ಪ್ರಕೃತಿಗೂ ಹೆಸರೇ ಇವಳು

ಅವಳಿಲ್ಲದೆ ಪ್ರಪಂಚವಿಲ್ಲ
ಅವಳಿಲ್ಲದೆ ಜೀವವೇ ಇಲ್ಲ


© ಭಾರ್ಗವಿ ವರ್ಧನ್*(ಭಾವ)*✍🏻