...

6 views

ಪ್ರೀತಿ
ಕಂಗಳ ನೋಟದಲ್ಲಿಯೇ ಕೊಂದು
ಮನಸಿನಾಳದ ತೀರದಲಿ ಬಂದು
ನಿನ್ನ ನೆನಪುಗಳ ಭಂಡಾರವನ್ನು
ಸ್ವಲ್ಪವೇ ಕದ್ಕೋಂಡು ಹೋಗಬಾರದೆ
ಕನಸಲ್ಲಿ ಬಂದು ನೋಯಿಸದೆ
ನನಸಲಿಯೇ ತೀರಾ ಬಳಿ ಬಂದು
ಮನಸ್ಸನ್ನೇ ಬಗೆದು ಹೃದಯವ
ಹೊತ್ತುಕೊಂಡು ಹೋಗಬಾರದೆ...
ಮನಸ್ಸಿನಲಿಯೇ ತಡೆದುಕೊಂಡಿರುವ
ನೂರಾರು ಮೌನದ ಮಾತುಗಳು
ನಿನ್ನೊಟ್ಟಿಗೆ ಮಾತನಾಡಿಸದೆ
ಕಾದು ಕೂತಿವೆ ಒಮ್ಮೆಯಾದರೂ...