...

23 views

ಕಲಿಯುಗ
ಯಾರಿಗೆ ಯಾರಿಲ್ಲಿ 
ಈ ಸ್ವಾರ್ಥ ಲೋಕದಲ್ಲಿ
ನನ್ನೋರು ಯಾರಿಲ್ಲೀ 
ಈ ಬಾಳ ಲೋಕದಲ್ಲಿ
ಮಾನವೀಯತೆ ಮರೆತು 
ನಡೆವ ಮಾನವರು
ನಾನು ನನ್ನದು
ಎನ್ನುವ ದಾನವರು
ಒಬ್ಬರನ್ನೊಬ್ಬರು
ನಂಬಲು ಆಗದೆ
ನಡೆಯೋ ಕಾಲವೇ ಕಲಿಯುಗ....

ಯಾರಿಗೆ ಯಾರಿಲ್ಲಿ 
ಈ ಸ್ವಾರ್ಥ ಲೋಕದಲ್ಲಿ
ನಾನ್ನೋರು ಯಾರಿಲ್ಲಿ
ಈ ಬಾಳ ದಾರಿಯಲ್ಲಿ
ನ್ಯಾಯ ನೀತಿಯು ಅಂತ್ಯವಾಗಿದೆ
ಮೋಸ ವಂಚನೆ ನಿತ್ಯವಾಗಿದೆ
ಮಾನವೀಯತೆ ಮಾಯವಾಗಿದೆ
ಮನುಷ್ಯತ್ವವ ಕಳೆದು
ಅಡ್ಡದಾರಿಯ ಹಿಡಿದು
ಅನ್ಯಾಯದ ಅಟ್ಟಹಾಸ
ಸತ್ಯದ ಸರ್ವನಾಶ
ಸತ್ಯವು ಕಹಿಯಾಗಲು
ಸುಳ್ಳೇ ಸಿಹಿಯಾಗಿದೆ
ಅರಿಯೋ ನೀ ಯುಗದ ಸತ್ಯ
ತಿಳಿಯೋ ನೀ ಕಲಿಯುಗದ ನಿತ್ಯ
ಧರ್ಮವು ತಲೆಬಾಗಿದೆ
ಅಧರ್ಮವು ತಲೆಯೆತ್ತಿದೆ
ಕರುಣೆಯೂ ಕೊನೆಯಾಗಿದೆ
ಹಿಂಸೆಯು ಹೆಚ್ಚಾಗಿ
ಮಾನವ ಇಂದು ದಾನವನಾದ
ಇದೇ ಕಲಿಗಾಲ ಭಯಾನಕ..........

ಎದ್ದರೂ ಕಲಿಯುಗದ ಕಲಿಗಳು
ಬಿಟ್ಟು ಎಲ್ಲ ಸದ್ಗುಣಗಳು 
ನಿಂತರು ಅನ್ಯಾಯದ ಕಡೆಗೆ
ನ್ಯಾಯ ನೀತಿಯ ಮರೆತು
ಮೋಸ ವಂಚನೆ ಮೆರೆದು
ಮಾನವೀಯತೆ ಮುರಿದು
ಸರ್ವ ಧರ್ಮವ ತೊರೆದು 
ಕಲಿಗಾಲ ಕಲಿಯುಗ..........
ಕಲಿಗಾಲ ಕಲಿಯುಗ..........
ಕಲಿಗಾಲ ಕಲಿಯುಗ..........
ಕಲಿಗಾಲ ಕಲಿಯುಗ..........

ನನ್ನೋರು ಯಾರಿಲ್ಲಿ
ಈ ಕಲಿ ಯುಗದಲ್ಲಿ
ಯಾರಿಗೆ ಯಾರಿಲ್ಲಿ
ಈ ಜನರ ನಡುವಲ್ಲಿ
ಶಿಷ್ಟ ಜನರ ಸೌಜನ್ಯ
ದುಷ್ಟ ಜನರ ದೌರ್ಜನ್ಯ
ಅಟ್ಟಹಾಸ ಮಿತಿಮೀರಿದೆ
ಕರುಣೆಯೂ ಕೊನೆಯಾಗಿದೆ
ಈ ಕಲಿಯುಗ ಭಯಂಕರ...........

ಎಲ್ಲಾ ಪಾಪಕ್ಕೆ ಎಲ್ಲಾ ಪುಣ್ಯಕ್ಕೆ
ಇಲ್ಲೇ ಸ್ವರ್ಗವು ಇಲ್ಲೇ ನರಕವು
ಆಗಲಿ ಕಲಿಯುಗದ ಪರಿವರ್ತನೆ
ಶರವೇಗದ ಬದಲಾವಣೆ
ಅಟ್ಟಹಾಸ ಕೊನೆಗಾಣಲಿ 
ಮಂದಹಾಸ ಮನೆ ಮಾಡಲಿ 
ಆಗಲಿ ಆರಂಭ
ಹೊಸತನದ ಹೊಸಯುಗವು 
ಪಡೆಯಲಿ ಜನ್ಮವು
ಕಲಿಗಾಲ ಕಲಿಯುಗ..........
ಕಲಿಗಾಲ ಕಲಿಯುಗ..........
ಕಲಿಗಾಲ ಕಲಿಯುಗ..........
ಕಲಿಗಾಲ ಕಲಿಯುಗ..........
ಕಲಿಗಾಲ ಕಲಿಯುಗ..........
ಕಲಿಗಾಲ ಕಲಿಯುಗ..........

© chethan_kumar