...

4 views

ಮಳೆ
ಓ ಚಿಟ ಪಟ ಸದ್ದಿನ ಮಳೆ ಹನಿಯೆ,
ಅಪರೂಪಕ್ಕೆ ಇಂದು ನೀ ಬಂದಿರುವೇ !
ಮೋಡಗಳ ಭಾವನೆಯ ಕಂಬನಿಯೆ,
ಹೇಳುವೆಯ ನೀ ಒಮ್ಮೆ ಹೇಗಿರುವೇ ?

ಕಣ್ಣ ಕಾಡಿಗೆಯ ಕಪ್ಪು ಮೋಡ ಸಾರುತ್ತದೆ
ನಾ ನಿಮ್ಮ ಊರಿಗೆ ಬರುವೆನ್ನೆಂದು,
ತಂಪಾದ ತಿಳಿ ತಂಗಾಳಿ ತಿಳಿಸುತ್ತದೆ
ನಾ ನಿಮ್ಮ ಪಕ್ಕದೂರಿಗೆ ಬಂದೆನ್ನೆಂದು

ಗುಡುಗಿನ ಸದ್ದು ಓಲಗದಂತೆ ಕೇಳಿಸಿತು
ದೀಪಾವಳಿ ಸಿಡಿಮದ್ದ ಮರೆಸಿದ ಸಿಡಿಲು
ಮಿಂಚು ಕತ್ತಲಲ್ಲಿ ಕಣ್ಣು ಮಿಟುಕಿಸಿತು
ಭಯಕ್ಕೆ ಮಗುವು ಸೇರಿತು ಅಮ್ಮನ ಮಡಿಲು

ನೀ ಬರುವ ವೇಳೆಗೆ ಹಕ್ಕಿ ಸೇರಿತು ಗೂಡು
ಮೂಲೆಯಲ್ಲಿದ ಕೊಡೆಗೆ ಆಚೆ ಬರುವ ತವಕ
ಬಾನಲ್ಲಿ ಕಣ್ಮುಚ್ಚಾಲೆ ಆಡುವ ಕಾಮನಬಿಲ್ಲ ನೋಡು
ಈ ಸುಂದರ ಅನುಭವ ಕಥನವೇ ರೊಚಕ

© hiddenwords_of_heart