...

22 views

ನನ್ನ ಪ್ರೇಮವೇ
ಕಡಲ ತೆರೆಯಲೊಂದು ಮನೆಯ ಮಾಡಿ
ನಿತ್ಯವೂ ನಿನ್ನ ನೆನೆದು ಹಾಡಬೇಕೆಂಬುವ ಮನಸು ನನಗಿದೆ.
ಉಸಿರು ಬಿಡುವ ಗಾಳಿಯಲ್ಲಿ
ನಿನ್ನ ಹೆಸರು ತೇಲಿ ಬಿಡುವ ಬಯಕೆ ನನಗಿದೆ....

ಕನಸು ಕಾಣುವ ಈ ಕಣ್ಣ ರೆಪ್ಪೆಯಡಿಯಲ್ಲಿ
ನಿನ್ನ ಇಟ್ಟು ನೋಡುವಾಸೆ ಮನದಲಿಂದು ಮೂಡಿದೆ.
ನಗುವ ಬಯಕೆ ಎಂದಿಗೂನು ನಿನ್ನ ಜೊತೆಯಲೆಂದು
ನಾಚಿಕೆಯ ನಗೆಯ ಕೆನ್ನೆ ಸದ್ದು ಮಾಡಿದೆ....

ಪ್ರೀತಿಯೆಂಬ ಗಿಡವನ ನೆಟ್ಟು
ನಗು ಎಂಬ ಹಸಿರ ತೊಟ್ಟು.
ಸ್ನೇಹವೆಂಬ ನೀರನೇರೆದು
ಬದುಕು ಎಂಬ ನಗೆಯ ಹೂ ಬಿಟ್ಟು
ಮತ್ತೆ ನಿನ್ನ ಮುಡಿಗೆ ಸೇರಬೇಕೆಂಬ
ಹೊಸ ಕಾವ್ಯವೊಂದು ,
ಮನದಲಿಂದು ಮೂಡಿದೆ ......
ಮನದಲಿಂದು ಮೂಡಿದೆ......!!

ಇಂತಿ ನಿನ್ನವ..♥️♥️

© All Rights Reserved