...

16 views

ವ್ಯಥೆ - 1
ಏನು ಮಾಡಲಿ ಈಗ ನಾನು
ಎಲ್ಲಿ ಹೋಗಲಿ ಇನ್ನು ನಾನು
ಪ್ರತಿ ಹೆಜ್ಜೆ ಇಡುವಲ್ಲಿ ಅವಮಾನ
ಅದರಿಂದ ನನಗೀಗ ಬರೀ ಮೌನ......

ಗೆದ್ದಾಗ ಎಲ್ಲರೂ ಇದ್ದೂ 
ಸೋತಾಗ ಒಬ್ಬರೂ ಇಲ್ಲ
ನಕ್ಕರೆ ಸಹಿಸದವರು
ಕಣ್ಣೀರು ಒರೆಸದವರು
ನನ್ನ ಸುತ್ತಲೂ ಇರಲು.......

ನಗುವು ಮರೆಯಾಗಿದೆ
ನೋವೇ ಹೆಚ್ಚಾಗಿದೆ
ನನ್ನನು ನೋಡಿ ನಕ್ಕು
ಅಪಮಾನ ಮಾಡುವರೆಲ್ಲ.................

ನೋವಿನ ಸಾಗರದೇ 
ಕಣ್ಣೀರೇ ಅಲೆಗಳು
ನಗುವಿನ ದೋಣಿಯು
ಮುಳುಗಿದೆ ನೋವಿನೊಳು................

ಹಗಲನು ಇರುಳು ನುಂಗಿರಲು 
ಕಣ್ಣಿಗೆ ಬಟ್ಟೆಯ ಕಟ್ಟಿ
ಕಾಡಿನೊಳು ಬಿಟ್ಟ ರೀತಿ 
ದಿಕ್ಕು ತೋಚದೆ ದಾರಿ ಕಾಣದೆ...........
_____________________________

ಏನು ಮಾಡಲಿ ಇನ್ನು ನಾನು
ಎಲ್ಲಿ ಹೋಗಲಿ ಈಗ ನಾನು
ಪ್ರತಿ ಮಾತು ನುಡಿವಲ್ಲಿ ಅನುಮಾನ
ಅದರಿಂದ ನನಗೀಗ ಬರೀ ಮೌನ......

ಹೊರಗೆ ನಗುವಿರಲು 
ಒಳಗೆ ಬರೀ ನೋವಿರಲು 
ಯಾರಲ್ಲಿ ಹೇಳಲಿ ನಾನು
ಈ ನನ್ನ ನೋವಿನ ಮಾತು................

ಬಾಯಾರೆ ಹೊಗಳಿ ಹೊಗಳಿ 
ಮನಸಾರೆ ತೆಗಳುತಿರಲು 
ಒಳಗೊಂದು ಹೊರಗೊಂದು
ಹೇಗೆ ನಂಬಲಿ ಇನ್ನು ಇನ್ನೊಬ್ಬರ.......

ಸತ್ಯಕ್ಕೆ ಜಯವೇ ಇಲ್ಲ
ಸುಳ್ಳಗೇ ಆಧ್ಯತೆ ಎಲ್ಲಾ
ಅಪವಾದದೇ ಅನುಮಾನವು
ಅನುಮಾನವೇ ಅವಮಾನವು..........

ನಾನೊಬ್ಬನೇ ನನಗೀಗ
ಈ ಬೇಸರದೆ ಮಂಕಾಗಿ
ಏಕಾಂಗಿಯು ನಾನೀಗ
ಬಯಸಲು ಮುಂದೇನಿದೆ
ವಿಧಿಯ ಅಧೀನವು ನಾನು................

© chethan_kumar