🌳ಪ್ರಕೃತಿಯೆ ಜೀವದುಸಿರು🌳
ಓ ದೈವದತ್ತ ಪ್ರಕೃತಿಯೆ ನೀನೆಷ್ಟು ಸುಂದರ
ಒಡಲಲಿಟ್ಟು ಸಲಹುತ್ತಿರುವ ನಿನ್ನೀ ಮನಸು ಉದಾರ
ತೋರುತ್ತಿರುವೆ ಜೀವಸಂಕುಲಗಳಿಗೆ ಪ್ರೀತಿಯ ಆಗರ
ಪ್ರಕೃತಿಯ ನಿಶ್ಯಬ್ದವು ಸಂಗೀತದಂತೆ ಕರ್ಣಕೆ ಮಧುರ|1|
ಪಚ್ಚಲೆಗಳಿಂದ ಆವೃತವಾದ ಮನಮೋಹಕ ಪ್ರಕೃತಿ
ನವವಧುವಿನಂತೆ ಕಂಗೊಳಿಸುವ ಚೆಲುವಿನ ಆಕೃತಿ
ಜೀವಿಗಳ ಬದುಕಿಗೆ ಆಸರೆಯಾಗುವ ಸುಕೃತಿ
ಹಸಿರನೊದ್ದ ವನದೇವತೆಯ ಅಮೋಘ ಕಲಾಕೃತಿ |2|
ಪ್ರಕೃತಿಯಲ್ಲಿ ಅಡಗಿದೆ ವರ್ಣಿಸಲಾಗದ ಸೌಂದರ್ಯ
ಉದಾರ ಭಾವ ತುಂಬಿದ ನಿಷ್ಕಲ್ಮಶ ಆಂತರ್ಯ
ಪ್ರಕೃತಿ ಪ್ರೇಮಿಗಳಿಗೆ ಗೋಚರಿಸುವುದು ಚೆಲುವಿನ ಗಾಂಭೀರ್ಯ
ಅರಿಯಲಾಗದ ನಿಸರ್ಗದ ರಹಸ್ಯಗಳು ಮನುಜನಿಗೆ ಆಶ್ಚರ್ಯ|3|
ನೀನೊಂದು ಊಹಿಸಲಾಗದ ಅದ್ಭುತ ಶಕ್ತಿ
ನೆತ್ತರಿನ ಕಣಕಣದಿ ಹರಿಯುತ್ತಿದೆ ಆರಾಧಿಸುವ ಭಕ್ತಿ
ವನಸಿರಿಯ ಸಂಪತ್ತನ್ನು ರಕ್ಷಿಸಲು ಮನದಲ್ಲಿರಲಿ ಆಸಕ್ತಿ
ಹಸಿರ ಮೈಹೊದ್ದು ಅರಳುವ ಸುಮಗಳ ಪಸರಿಸುವ ಶುಕ್ತಿ |4|
ಪರಿಸರದೊಂದಿಗೆ ಬೆಸೆದಿದೆ ಜನರ ಒಡನಾಟ
ಸಮನ್ವಯತೆಯಿಂದ ಸಹಕರಿಸುತ್ತ ಬದುಕುವುದೆ ಪರಿಪಾಠ
ನೈಸರ್ಗಿಕ ವಿಕೋಪಗಳು ಕಲಿಸಿದೆ ಮರೆಯಲಾಗದ ಪಾಠ
ಸರ್ವರನ್ನು ಆಕರ್ಷಿಸಿ ಕರೆಯುತ್ತಿದೆ ಸೃಷ್ಟಿಯ ವಿಹಂಗಮ ನೋಟ|5|
ಮಾನವನ ಉಳಿವು ಸಾಧನೆಗೆ ನೀನೆ ಕಾರಣಳು
ಹೃತ್ಪೂರ್ವಕವಾಗಿ ಸಲ್ಲಿಸಬೇಕಿದೆ ಪ್ರೀತಿಯ ಧನ್ಯವಾದಗಳು
ಗಿರಿಶಿಖರಗಳ ನಡುವೆ ಓಡುವ ಬೆಳ್ಳಿಯ ಮೋಡಗಳು
ಮೂಡಿಸುವುದು ಮನದಲಿ ಸುಮಧುರ ಭಾವನೆಗಳು|6|
ಸಸ್ಯಶ್ಯಾಮಲೆಗೆ ಜಾತಿ ಭೇದವೆನ್ನದೆ ಸರ್ವರು ಸಮಾನರು
ಪ್ರಾಣ ಉಳಿಸುವ ಹಸಿರೆ ನಮ್ಮೆಲ್ಲರ ಜೀವದುಸಿರು
ಪ್ರಕೃತಿಯ ಮಡಿಲಲಿ ಆಡಿ ಬೆಳೆದ ನಾವೇ ಧನ್ಯರು
ಪ್ರೀತಿಸುತ್ತ ಗೌರವಿಸಬೇಕು ಪ್ರಕೃತಿಯ ಹಸಿರು|7|
ಹಸಿರೊದ್ದ ಸಹನೆಯ ಭುವಿಯನು ಸ್ವರ್ಗವಾಗಿಸಿದೆ
ಸೊಗಸನು ವೀಕ್ಷಿಸುತ್ತ ಹೃದಯದ ನೋವ ಮರೆಸಿದೆ
ಹಚ್ಚಹಸಿರರಾಶಿ ಎಲ್ಲರನ್ನು ಕೈಬೀಸಿ ತನ್ನತ್ತ ಕರೆದಿದೆ
ಮೈದಳೆದ ಹಸಿರು ಮದುವಣಗಿತ್ತಿಯಂತೆ ಶೋಭಿಸುತ್ತಿದೆ |8|
_✍️ಶೃತಿ ಶೈವ
#ಪ್ರಕೃತಿ#ಮಲೆನಾಡು#ಕಾಫಿನಾಡು
#ಉಸಿರು#WritcoQuote#writcoapp
#Writer#Writco#shruthishaiva
#Writcopoem