ಮುಂಗುರುಳ ಚೆಲುವೆ 👩
ಸುಂದರ ಮೊಗದ ಮುಂಗುರುಳ ಚೆಲುವೆ
ಲಜ್ಜೆಯು ಹೆಚ್ಚಾಗಿ ಕಂಗಳಲಿ ಕರೆವೆ
ಹೃದಯದಿ ಮೂಡಿದೆ ಪರಿಶುದ್ಧ ಒಲುಮೆ
ಬತ್ತದಿರಲಿ ಬಾಂಧವ್ಯದೈಸಿರಿಯ ಚಿಲುಮೆ
ಪ್ರೇಮದ ಸಾರವ ಸಾರಿದೆ ಚೈತನ್ಯದೊಲವು
ಎನಿತು ಬಣ್ಣಿಸಲಿ ಚಿಮ್ಮುವ ನಿನ್ನೊಲವು ||1||
ತಂಗಾಳಿಗೆ ಹಾರುವ ಮುಂಗುರುಳ ಒನಪು
ನಾಚಿ ನೀರಾಗಿ ಕೆಂಪೇರಿದೆ ನನ್ನವಳ ಕದಪು
ಛೇಡಿಸುತ್ತಿರುವೆ ಏತಕೆ ನನ್ನಯ ಹುಡುಗಿಗೆ
ಕಾರಣ ಅವಳು ಕೊಟ್ಟ ಅತಿಯಾದ ಸಲುಗೆ
ನೋಡುತ ಕಳೆದೋಗುವೆ ಕಳ್ಳಾಟದ ತುಂಟಾಟಕೆ
ನಗುತ ಅವಳೊಂದಿಗಿರುವೆ ಮಾತಲಿ ಚಟುವಟಿಕೆ ||2||
ತಂಗಾಳಿಯೊಂದಿಗೆ ಸರಸವಾಡುತ್ತಿದೆ ಮುಂಗುರುಳು
ನಿನ್ನದೆ ಯೋಚನೆಯಲ್ಲಿ ಮುಳುಗಿರುವೆ ಹಗಲಿರುಳು
ಸದ್ದು ಮಾಡದೆ ಮೆಲ್ಲನೆ ಇಣುಕಿ ನೋಡುವೆ ಮೊಗವ
ಮೆಚ್ಚಿ ಬಂದಿಹೆನು ತೆಗೆಯುವೆಯಾ ಹೃದಯದ ಕದವ
ಅತ್ತಿತ್ತ ನಲಿದು ಬಿಂಕದಿ ಸುಳಿದಾಡುವೆ ನನ್ನವಳ ಸುತ್ತ
ತಂಗಾಳಿಗೆ ಹಾರಿ ಕೊಡುವೆ ಆಗಾಗ ಸಿಹಿಯಾದ ಮುತ್ತ ||3||
ಮನದೊಳಗೆ ಎದ್ದಿವೆ ನೂರಾರು ಬಯಕೆಗಳ ಬುಗ್ಗೆ
ಅರಿಯದೆ ಇಟ್ಟಿವೆ ಕನಸುಗಳು ತೀರದ ಲಗ್ಗೆ
ಅರಸುತ್ತಿದೆ ಮನಸ್ಸು ಚೆಲುವೆಯ ಇರುವಿಕೆಯನು
ಸೆಳೆಯುತ್ತಿದೆ ಮುಂಗುರುಳು ಅವಳ ಸನಿಹವನು
ಸ್ಪರ್ಶಿಸುವಾಸೆ ಬೆರಳ ತುದಿಯಲಿ ಮುಂಗುರುಳ
ಕೊಂಚ ವಿರಾಮವಿಲ್ಲದೆ ನರ್ತಿಸುತ್ತಿವೆ ಹಾಲ್ಗೆನೆಗಳ ||4||
ಅರಿಯದೆ ಎನ್ನ ಮೋಹದಲಿ ಬೀಳಿಸಿರುವೆ
ನಿನ್ನ ನೆನಪಲಿ ಹುಚ್ಚೆಂದು ಕುಣಿಯುತ್ತಿರುವೆ
ಹೇ ಮುಂಗುರುಳೆ ಒಮ್ಮೆ ಬಳಿಬಾರದೆ
ಕಾದ ತುಟಿಗಳಿಗೆ ಚುಂಬಿಸಿ ಹೋಗಬಾರದೆ
ಒಲವಿನ ಸ್ಪರ್ಶ ಸುಖಕೆ ಕಾಯುತ್ತಿರುವೆ
ಬಿಸಿಯುಸಿರ ಶಬ್ದವ ಆಲಿಸಲು ಹವಣಿಸುತ್ತಿರುವೆ ||5||
ಮುಂಗುರುಳು ಬಾಚಿ ತಬ್ಬಿದೆ ನಿನ್ನಂದದ ಮೊಗವ
ಪೂರ್ಣನೋಡಲು ಕೊಡುವೆಯಾ ಒಂದು ಅವಕಾಶವ
ಬೀಸುವ ಹೇ ಗಾಳಿಯೆ ಸರಿಸಿ ಬಾ ಅವಳ ಕೇಶರಾಶಿಯ
ಸಮ್ಮತಿಗಾಗಿ ಕಾಯುತ್ತಿಹೆನು ಕನಸುಗಳ ಕಟ್ಟಿ ನಿನ್ನ ದಾರಿಯ
ಮುಂಗುರುಳ ಚೆಲುವೆಗೆ ನಾ ಸೋತು ಹೋದೆ
ನೀ ನಗುವ ಚೆಂದದ ಗುಳಿಕೆನ್ನೆಗೆ ಬೆರಗಾಗಿ ನಿಂದೆ ||6||
✍️ಶೃತಿ ಶೈವ
#WritcoQuote#writcoapp#Writer#Writco#shruthishaiva#Writcopoem#ಮುಂಗುರುಳಚೆಲುವೆ#ಹೆಣ್ಣು
ಲಜ್ಜೆಯು ಹೆಚ್ಚಾಗಿ ಕಂಗಳಲಿ ಕರೆವೆ
ಹೃದಯದಿ ಮೂಡಿದೆ ಪರಿಶುದ್ಧ ಒಲುಮೆ
ಬತ್ತದಿರಲಿ ಬಾಂಧವ್ಯದೈಸಿರಿಯ ಚಿಲುಮೆ
ಪ್ರೇಮದ ಸಾರವ ಸಾರಿದೆ ಚೈತನ್ಯದೊಲವು
ಎನಿತು ಬಣ್ಣಿಸಲಿ ಚಿಮ್ಮುವ ನಿನ್ನೊಲವು ||1||
ತಂಗಾಳಿಗೆ ಹಾರುವ ಮುಂಗುರುಳ ಒನಪು
ನಾಚಿ ನೀರಾಗಿ ಕೆಂಪೇರಿದೆ ನನ್ನವಳ ಕದಪು
ಛೇಡಿಸುತ್ತಿರುವೆ ಏತಕೆ ನನ್ನಯ ಹುಡುಗಿಗೆ
ಕಾರಣ ಅವಳು ಕೊಟ್ಟ ಅತಿಯಾದ ಸಲುಗೆ
ನೋಡುತ ಕಳೆದೋಗುವೆ ಕಳ್ಳಾಟದ ತುಂಟಾಟಕೆ
ನಗುತ ಅವಳೊಂದಿಗಿರುವೆ ಮಾತಲಿ ಚಟುವಟಿಕೆ ||2||
ತಂಗಾಳಿಯೊಂದಿಗೆ ಸರಸವಾಡುತ್ತಿದೆ ಮುಂಗುರುಳು
ನಿನ್ನದೆ ಯೋಚನೆಯಲ್ಲಿ ಮುಳುಗಿರುವೆ ಹಗಲಿರುಳು
ಸದ್ದು ಮಾಡದೆ ಮೆಲ್ಲನೆ ಇಣುಕಿ ನೋಡುವೆ ಮೊಗವ
ಮೆಚ್ಚಿ ಬಂದಿಹೆನು ತೆಗೆಯುವೆಯಾ ಹೃದಯದ ಕದವ
ಅತ್ತಿತ್ತ ನಲಿದು ಬಿಂಕದಿ ಸುಳಿದಾಡುವೆ ನನ್ನವಳ ಸುತ್ತ
ತಂಗಾಳಿಗೆ ಹಾರಿ ಕೊಡುವೆ ಆಗಾಗ ಸಿಹಿಯಾದ ಮುತ್ತ ||3||
ಮನದೊಳಗೆ ಎದ್ದಿವೆ ನೂರಾರು ಬಯಕೆಗಳ ಬುಗ್ಗೆ
ಅರಿಯದೆ ಇಟ್ಟಿವೆ ಕನಸುಗಳು ತೀರದ ಲಗ್ಗೆ
ಅರಸುತ್ತಿದೆ ಮನಸ್ಸು ಚೆಲುವೆಯ ಇರುವಿಕೆಯನು
ಸೆಳೆಯುತ್ತಿದೆ ಮುಂಗುರುಳು ಅವಳ ಸನಿಹವನು
ಸ್ಪರ್ಶಿಸುವಾಸೆ ಬೆರಳ ತುದಿಯಲಿ ಮುಂಗುರುಳ
ಕೊಂಚ ವಿರಾಮವಿಲ್ಲದೆ ನರ್ತಿಸುತ್ತಿವೆ ಹಾಲ್ಗೆನೆಗಳ ||4||
ಅರಿಯದೆ ಎನ್ನ ಮೋಹದಲಿ ಬೀಳಿಸಿರುವೆ
ನಿನ್ನ ನೆನಪಲಿ ಹುಚ್ಚೆಂದು ಕುಣಿಯುತ್ತಿರುವೆ
ಹೇ ಮುಂಗುರುಳೆ ಒಮ್ಮೆ ಬಳಿಬಾರದೆ
ಕಾದ ತುಟಿಗಳಿಗೆ ಚುಂಬಿಸಿ ಹೋಗಬಾರದೆ
ಒಲವಿನ ಸ್ಪರ್ಶ ಸುಖಕೆ ಕಾಯುತ್ತಿರುವೆ
ಬಿಸಿಯುಸಿರ ಶಬ್ದವ ಆಲಿಸಲು ಹವಣಿಸುತ್ತಿರುವೆ ||5||
ಮುಂಗುರುಳು ಬಾಚಿ ತಬ್ಬಿದೆ ನಿನ್ನಂದದ ಮೊಗವ
ಪೂರ್ಣನೋಡಲು ಕೊಡುವೆಯಾ ಒಂದು ಅವಕಾಶವ
ಬೀಸುವ ಹೇ ಗಾಳಿಯೆ ಸರಿಸಿ ಬಾ ಅವಳ ಕೇಶರಾಶಿಯ
ಸಮ್ಮತಿಗಾಗಿ ಕಾಯುತ್ತಿಹೆನು ಕನಸುಗಳ ಕಟ್ಟಿ ನಿನ್ನ ದಾರಿಯ
ಮುಂಗುರುಳ ಚೆಲುವೆಗೆ ನಾ ಸೋತು ಹೋದೆ
ನೀ ನಗುವ ಚೆಂದದ ಗುಳಿಕೆನ್ನೆಗೆ ಬೆರಗಾಗಿ ನಿಂದೆ ||6||
✍️ಶೃತಿ ಶೈವ
#WritcoQuote#writcoapp#Writer#Writco#shruthishaiva#Writcopoem#ಮುಂಗುರುಳಚೆಲುವೆ#ಹೆಣ್ಣು