...

3 views

ಶ್ರೀವಿಷ್ಣುಪತ್ನಿ
ವಿಷ್ಣುಪತ್ನಿ

ವರದೆ ದೇವಿ ಧಾನ್ಯಲಕ್ಷ್ಮಿ
ಶರಣು ಬಂದೆ ಮಾತೆಯೆ|
ವರವ ನೀಡು ಮಹಾಲಕ್ಷ್ಮಿ
ಕರವ ಮುಗಿವೆ ತಾಯಿಯೆ||

ಹರಿಯ ಪಾದ ಸೇವೆ ಮಾಡಿ
ನಲ್ಮೆಯನ್ನು ತೋರುವೆ|
ಗರುಡಗಮನ ವಿಷ್ಣುಮೂರ್ತಿ
ಜೊತೆಯೆ ನೀನು ಬದುಕುವೆ||

ಭಕ್ತಿಯಿಂದ ಪೂಜೆಗೆಯ್ವ
ಭಕ್ತರನ್ನು ಪೊರೆಯುವೆ|
ಶಕ್ತಿಮಾತೆ ಮಾರಜನನಿ
ನಿನ್ನ ನಾಮ ಭಜಿಸುವೆ||

ಪದ್ಮಚರಣದಲ್ಲಿ ಬಾಗಿ
ನಿನ್ನ ದಯೆಯ ಬೇಡುವೆ|
ಪದ್ಮಮುಖಿಯೆ ವಿಷ್ಣುಪತ್ನಿ
ಹರಸು ತಾಯಿ ಕೋರುವೆ||

ಕಮಲವದನೆ ವಿದ್ಯೆಲಕುಮಿ
ಭಕ್ತರನ್ನು ರಕ್ಷಿಸು|
ಸುಮನದೇವಿ ಬೇಡಿಕೊಳುವೆ
ಶಿಷ್ಟರನ್ನು ಪೋಷಿಸು||

ಚಂದು ವಾಗೀಶ ದಾವಣಗೆರೆ